Publish Date: Tue, 12 Sep 2023 (09:40 IST)
Updated Date: Tue, 12 Sep 2023 (09:40 IST)
ಕೊಲೊಂಬೊ: ಸತತ ಮಳೆಯಾಗುತ್ತಿದ್ದರೂ ಎರಡು ದಿನಗಳಿಂದ ನಿರಂತರವಾಗಿ ಮೈದಾನ ಒದ್ದೆಯಾಗದಂತೆ ಸಂರಕ್ಷಿಸಿದ ಮೈದಾನ ಸಿಬ್ಬಂದಿಗಳಿಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅಭಿನಂದನೆ ಸಲ್ಲಿಸಿದ್ದಾರೆ.
ಪಂದ್ಯದ ಬಳಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರೋಹಿತ್ ಶರ್ಮಾ ಮೈದಾನ ಸಿಬ್ಬಂದಿಗಳನ್ನು ವಿಶೇಷವಾಗಿ ಕೊಂಡಾಡಿದರು. ಸತತ ಎರಡು ದಿನದಿಂದ ಅವಿರತವಾಗಿ ಮೈದಾನ ಒಣಗಿಸಲು ಸಿಬ್ಬಂದಿಗಳು ಮಾಡಿದ ಕೆಲಸ ನಿಜಕ್ಕೂ ಅಭಿನಂದನಾರ್ಹ. ಇದು ಅಷ್ಟು ಸುಲಭದ ಕೆಲಸವಲ್ಲ. ಇಡೀ ತಂಡದ ಪರವಾಗಿ ಅವರಿಗೆ ನಮ್ಮ ಕೃತಜ್ಞತೆಗಳು ಎಂದರು.
ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಕೊನೆಯಲ್ಲಿ ಜ್ಞಾಪಿಸಿಕೊಂಡು ವಿರಾಟ್ ಕೊಹ್ಲಿ ಕೂಡಾ ಸಿಬ್ಬಂದಿಗಳನ್ನು ಅಭಿನಂದಿಸಿದರು. ಇನ್ನು, ಇದೇ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿ ಶತಕ ಸಿಡಿಸಿದ ಕೆಎಲ್ ರಾಹುಲ್ ಕೂಡಾ ಸೋಷಿಯಲ್ ಮೀಡಿಯಾ ಮೂಲಕ ಮೈದಾನ ಸಿಬ್ಬಂದಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.