Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಕ್ರಿಕೆಟ್: ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್ ಮಾಡಿದ ಕೊಹ್ಲಿ-ಕೆಎಲ್ ರಾಹುಲ್

ಏಷ್ಯಾ ಕಪ್ ಕ್ರಿಕೆಟ್: ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್ ಮಾಡಿದ ಕೊಹ್ಲಿ-ಕೆಎಲ್ ರಾಹುಲ್
ಕೊಲೊಂಬೋ , ಸೋಮವಾರ, 11 ಸೆಪ್ಟಂಬರ್ 2023 (19:31 IST)
ಕೊಲೊಂಬೋ: ಏಷ್ಯಾ ಕಪ್ ಕ್ರಿಕೆಟ್ ನ ಭಾರತ-ಪಾಕಿಸ್ತಾನ ನಡುವಿನ ಸೂಪರ್ ಫೋರ್ ಪಂದ್ಯ ನಿಜಕ್ಕೂ ಸೂಪರ್ ಆಗಿದೆ. ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ-ಕೆಎಲ್ ರಾಹುಲ್ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿ ಮಿಂಚಿದ್ದಾರೆ.

ನಿನ್ನೆ 24.1 ಓವರ್ ಗಳ ಆಟವಾದಾಗ ಮಳೆ ಬಂದಿತ್ತು. ಆಗ ಭಾರತದ ಮೊತ್ತ 2 ವಿಕೆಟ್ ನಷ್ಟಕ್ಕೆ 147 ರನ್ ಆಗಿತ್ತು. ಇಂದು ಮೀಸಲು ದಿನ ಬ್ಯಾಟಿಂಗ್ ಮುಂದುವರಿಸಿದ ಅಂತಿಮವಾಗಿ 50 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತು.

ವಿರಾಟ್ ಕೊಹ್ಲಿ 94 ಎಸೆತಗಳಿಂದ ಅಜೇಯ 122, ಕೆಎಲ್ ರಾಹುಲ್ 106 ಎಸೆತಗಳಿಂದ ಅಜೇಯ 111 ರನ್ ಸಿಡಿಸಿದರು. ಇಬ್ಬರೂ ಪೈಪೋಟಿಗೆ ಬಿದ್ದಂತೆ ರನ್ ಗಳಿಸಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಿದರು. ಅದರಲ್ಲೂ ಕೊಹ್ಲಿ 49.5 ಓವರ್ ನಲ್ಲಿ ಸಿಡಿಸಿದ ಪ್ರಯೋಗಾತ್ಮಕ ಬೌಂಡರಿ ಶಾಟ್ ಎಲ್ಲರ ಗಮನ ಸೆಳೆಯಿತು. ಇದೀಗ ಬ್ಯಾಟಿಂಗ್ ಆರಂಭಿಸಿರುವ ಪಾಕ್ 4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 16 ರನ್ ಗಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಪಾಕ್ ಪಂದ್ಯಕ್ಕೆ ಇಂದೂ ಮಳೆ ಕಾಟ?