ಕೊಲೊಂಬೋ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಸತತ ಮೂರು ದಿನ ಏಕದಿನ ಮಾದರಿಯ ಪಂದ್ಯವಾಡುವಂತಾಗಿದೆ.
ನಿನ್ನೆ ಪಾಕಿಸ್ತಾನ ವಿರುದ್ಧ ಸೂಪರ್ ಫೋರ್ ಹಂತದ ಮೊದಲ ಪಂದ್ಯವಾಡಲಿಳಿದ ಭಾರತಕ್ಕೆ ಮಳೆ ಅಡ್ಡಿಯಾಗಿತ್ತು. ಹಾಗಿದ್ದರೂ ಆಟಗಾರರು 24.1 ಓವರ್ ಗಳಷ್ಟು ಬ್ಯಾಟಿಂಗ್ ಮಾಡಿದ್ದರು. ಇಂದು ಮೀಸಲು ದಿನ ಈ ಪಂದ್ಯದ ಮುಂದುವರಿದ ಭಾಗ ಆಡಬೇಕಿದೆ.
ನಾಳೆ ಈಗಾಗಲೇ ನಿಗದಿಯಾದಂತೆ ಶ್ರೀಲಂಕಾ ವಿರುದ್ಧ ಎರಡನೇ ಸೂಪರ್ ಫೋರ್ ಪಂದ್ಯವಾಡಲಿದೆ. ಹೀಗಾಗಿ ಸತತ ಮೂರು ದಿನ ಏಕದಿನ ಮಾದರಿಯ ಪಂದ್ಯವಾಡಿದಂತಾಗಲಿದೆ. ಆದರೆ ಈ ರೀತಿ ಬಿಡುವಿಲ್ಲದೇ ಆಡುವುದರಿಂದ ಆಟಗಾರರು ಗಾಯಗೊಳ್ಳದಂತೆ ನೋಡಿಕೊಳ್ಳುವುದು ಮುಖ್ಯ. ಮುಂಬರುವ ವಿಶ್ವಕಪ್ ಕೂಟಕ್ಕೂ ಇದೇ ಆಟಗಾರರು ಆಯ್ಕೆಯಾಗಿದ್ದಾರೆ. ಹೀಗಾಗಿ ರೋಹಿತ್ ಪಡೆಗೆ ಆಟಗಾರರನ್ನು ಗಾಯಗೊಳ್ಳದಂತೆ ಕಾಪಾಡಿಕೊಳ್ಳುವುದೇ ತಲೆನೋವಾಗಿದೆ.