Publish Date: Tue, 22 Nov 2022 (08:20 IST)
Updated Date: Tue, 22 Nov 2022 (08:46 IST)
ನೇಪಿಯರ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯ ಇಂದು ನಡೆಯಲಿದೆ. ಈ ಪಂದ್ಯ ಗೆದ್ದವರಿಗೆ ಸರಣಿ ಕೈವಶವಾಗಲಿದೆ.
ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು. ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 65 ರನ್ ಗಳ ಭರ್ಜರಿ ಗೆಲುವು ಕಂಡಿತ್ತು. ಹೀಗಾಗಿ ಇಂದಿನ ಪಂದ್ಯ ನಿರ್ಣಾಯಕ ಪಂದ್ಯವಾಗಲಿದೆ.
ಹಾರ್ದಿಕ್ ಪಡೆ ಕಳೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಬೌಲರ್ ಗಳ ಸಂಘಟಿತ ಬೌಲಿಂಗ್ ನಿಂದಾಗಿ ಗೆದ್ದಿತ್ತು. ರಿಷಬ್ ಪಂತ್ ಇನ್ನೂ ಫಾರ್ಮ್ ಕಂಡುಕೊಂಡಿಲ್ಲ. ದೀಪಕ್ ಹೂಡಾ ಮತ್ತೆ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ಬ್ಯಾಟಿಂಗ್ ಸುಧಾರಿಸಬೇಕಿದೆ. ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಈ ಪಂದ್ಯದಲ್ಲಾದರೂ ಪೂರ್ತಿಯಾಗುತ್ತದಾ ನೋಡಬೇಕು. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.