Publish Date: Sun, 20 Nov 2022 (07:30 IST)
Updated Date: Sun, 20 Nov 2022 (07:38 IST)
ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ನಲ್ಲಿ ಸೋಲು ಅನುಭವಿಸಿದ ಬಳಿಕ ಬಿಸಿಸಿಐ ತಂಡದಲ್ಲಿ ಭಾರೀ ಬದಲಾವಣೆಗೆ ಮುಂದಾಗಿದೆ.
ಇದರ ಮೊದಲ ಹಂತವಾಗಿ ಆಯ್ಕೆ ಸಮಿತಿಯನ್ನೇ ತೆಗೆದು ಹಾಕಿದೆ. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಆಯ್ಕೆ ಸಮಿತಿಗೆ ಕತ್ತರಿ ಹಾಕಲಾಗಿದೆ.
ಇದೀಗ ವಿವಿಎಸ್ ಲಕ್ಷ್ಮಣ್ ರನ್ನು ಹಂಗಾಮಿ ಕೋಚ್ ಆಗಿ ಕೆಲವು ಸರಣಿಗಳಿಗೆ ಕಳುಹಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಕೋಚ್ ರಾಹುಲ್ ದ್ರಾವಿಡ್ ಬಿಸಿಸಿಐ ಟಾರ್ಗೆಟ್ ಎನ್ನಲಾಗಿದೆ. ದ್ರಾವಿಡ್ ರನ್ನು ಕೇವಲ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಮಾತ್ರ ಕೋಚ್ ಆಗಿ ಮುಂದುವರಿಸಲು ಬಿಸಿಸಿಐ ಈ ಪ್ಲ್ಯಾನ್ ಮಾಡಿದೆ ಎನ್ನಲಾಗುತ್ತಿದೆ.