Webdunia - Bharat's app for daily news and videos

Install App

ಧೋನಿ ಹಿಂದೆಯೇ ಟೀಂ ಇಂಡಿಯಾ ಅದೃಷ್ಟವೂ ಹೊರಟು ಹೋಯ್ತಾ?!

Webdunia
ಗುರುವಾರ, 10 ನವೆಂಬರ್ 2022 (17:05 IST)
ಮುಂಬೈ: ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಎಲ್ಲಾ ಐಸಿಸಿ ಕೂಟಗಳಲ್ಲಿ ಯಶಸ್ಸು ಸಾಧಿಸಿದೆ. ಅವರನ್ನು ಅದೃಷ್ಟದ ನಾಯಕ ಎಂದೇ ಕರೆಯಲಾಗುತ್ತಿತ್ತು.

ಆದರೆ ಧೋನಿ ತಂಡದಿಂದ ಹೊರ ನಡೆದ ಬೆನ್ನಲ್ಲೇ ಟೀಂ ಇಂಡಿಯಾದ ಅದೃಷ್ಟವೋ ಹೊರಟು ಹೋಯ್ತಾ? ಹೀಗೊಂದು ಅನುಮಾನ ಕ್ರಿಕೆಟ್ ಪ್ರೇಮಿಗಳಿಗೆ ಬರದೇ ಇರದು.

ಧೋನಿ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಇಬ್ಬರೂ ನಾಯಕತ್ವದ ವಿಚಾರದಲ್ಲಿ ಯಾವುದೇ ಕಳಪೆಯೇನಲ್ಲ. ಹಾಗಿದ್ದರೂ ಇಬ್ಬರಿಗೂ ಐಸಿಸಿ ಟೂರ್ನಿಗಳಲ್ಲಿ ಯಶಸ್ಸು ಸಿಗುತ್ತಿಲ್ಲ ಎನ್ನುವುದು ವಿಪರ್ಯಾಸ.

ಟಾಸ್ ಗೆದ್ದೋನೇ ಬಾಸ್: ಇದಕ್ಕೆ ಇನ್ನೊಂದು ಪ್ರಮುಖ ಕಾರಣವಾಗುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಟಾಸ್ ನಿರ್ಣಾಯಕವಾಗುತ್ತಿದೆ. ಕಿರು ಮಾದರಿಗಳಲ್ಲಿ ಟಾಸ್ ಗೆದ್ದರೆ ಅರ್ಧ ಪಂದ್ಯ ಗೆದ್ದಂತೆ ಎಂಬ ಪರಿಸ್ಥಿತಿಯಿದೆ. ದುರದೃಷ್ಟವಶಾತ್ ಕೊಹ್ಲಿ ಮತ್ತು ರೋಹಿತ್ ಟಾಸ್ ಗೆಲ್ಲುವ ವಿಚಾರದಲ್ಲಿ ಹೆಚ್ಚು ಅದೃಷ್ಟ ಮಾಡಿಲ್ಲ. ಕೊಹ್ಲಿ ಸತತವಾಗಿ ಟಾಸ್ ಸೋತು ದಾಖಲೆಯನ್ನೇ ಮಾಡಿದವರು. ಈಗ ರೋಹಿತ್ ನಿರ್ಣಾಯಕ ಪಂದ್ಯಗಳಲ್ಲೇ ಟಾಸ್ ಸೋತು ಭಾರತಕ್ಕೆ ಹಿನ್ನಡೆಯಾಗುತ್ತಿದೆ. ಕಳೆದ ಏಷ್ಯಾ ಕಪ್ ನಲ್ಲೂ ಇದೇ ರೀತಿ ಆಗಿತ್ತು. ಈ ವಿಶ್ವಕಪ್ ನಲ್ಲೂ ಅದೇ ಮುಂದುವರಿದಿದೆ.

ದುರ್ಬಲ ಬೌಲಿಂಗ್: ಪ್ರಮುಖ ಪಂದ್ಯಗಳಲ್ಲೇ ಬಿಗ್ ಬ್ಯಾಟಿಗರು ಮಿಂಚಲು ವಿಫಲರಾಗುತ್ತಿರುವುದು ಒಂದು ಕಾರಣವಾದರೆ ಭಾರತದ ದುರ್ಬಲ ಬೌಲಿಂಗ್ ಇನ್ನೊಂದು ಕಾರಣ. ಇತ್ತೀಚೆಗಿನ ವರ್ಷಗಳಲ್ಲಿ ಭಾರತ ಬೌಲಿಂಗ್ ವಿಭಾಗದಲ್ಲಿ ಅತಿಯಾದ ಪ್ರಯೋಗ ನಡೆಸಿದೆ. ಆದರೆ ಕರಾರುವಾಕ್ ಆಗಿ, ನಿಯಮಿತವಾಗಿ ವಿಕೆಟ್ ಕೀಳಬಲ್ಲ ಸಮರ್ಥ ಬೌಲರ್ ಗಳನ್ನು ಇನ್ನೂ ಕಂಡುಕೊಂಡಿಲ್ಲ. ಈಗಲೂ ಜಸ್ಪ್ರೀತ್ ಬುಮ್ರಾ ಮೇಲೆಯೇ ಅತಿಯಾಗಿ ಅವಲಂಬನೆಯಾಗಿದೆ. ಏಷ್ಯಾ ಕಪ್ ಮತ್ತು ಈ ವಿಶ್ವಕಪ್ ನಲ್ಲಿ ಬೌಲರ್ ಗಳು ಆರಂಭದಲ್ಲೇ ವಿಕೆಟ್ ಕಿತ್ತು ಎದುರಾಳಿಗಳನ್ನು ನಿಯಂತ್ರಿಸಲು ವಿಫಲವಾಗಿದ್ದು ಇನ್ನೊಂದು ಪ್ರಮುಖ ಕಾರಣವಾಗಿದೆ.

ಕಳಪೆ ಆರಂಭ: ಯಾವುದೇ ತಂಡವಾದರೂ ಉತ್ತಮ ಆರಂಭ ಪಡೆದರೆ ಮುಂದೆ ರನ್ ಗಳಿಸುವುದು ಸುಲಭ. ಮಧ‍್ಯಮ ಕ್ರಮಾಂಕದ ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ. ಆಗ ಕೆಳ ಕ್ರಮಾಂಕದ ಬ್ಯಾಟಿಗರು ಸುಲಭವಾಗಿ ಬಿಗ್ ಹೊಡೆತಕ್ಕೆ ಕೈ ಹಾಕಬಹುದು. ಆದರೆ ಈ ಟೂರ್ನಿಯಲ್ಲಿ ಮಾತ್ರವಲ್ಲ, ಇತ್ತೀಚೆಗಿನ ದಿನಗಳಲ್ಲೇ ಭಾರತ ಅತ್ಯುತ್ತಮ ಆರಂಭ ಕಂಡಿದ್ದೇ ಅಪರೂಪ. ರೋಹಿತ್ ಶರ್ಮಾ ಒಂದು ಅರ್ಧಶತಕ ಸಿಡಿಸಿದ್ದು ಬಿಟ್ಟರೆ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಕೆಎಲ್ ರಾಹುಲ್ ಪ್ರಮುಖ ಪಂದ್ಯಗಳಲ್ಲೇ ಕೈ ಕೊಡುವ ಚಾಳಿ ಮುಂದುವರಿಸಿದರು. ಪ್ರತೀ ಪಂದ್ಯಗಳು ಭಾರತ ಆರಂಭದ ಎರಡು ಓವರ್ ಗಳಲ್ಲಿ ಎರಡಂಕಿ ಮೊತ್ತ ದಾಟುತ್ತಿರಲಿಲ್ಲ. ಜೊತೆಗೆ ವಿಕೆಟ್ ಕೂಡಾ ಕೈಚೆಲ್ಲುತ್ತಿತ್ತು. ಇದರಿಂದಾಗಿ ಮಧ್ಯಮ ಕ್ರಮಾಂಕದ ಮೇಲೆ ವಿಕೆಟ್ ಕಾಯ್ದುಕೊಳ್ಳುವುದರ ಜೊತೆಗೆ ರನ್ ಗಳಿಸುವ ಒತ್ತಡವಿರುತ್ತಿತ್ತು.

ಬ್ಯಾಟಿಂಗ್, ಬೌಲಿಂಗ್ ಎಲ್ಲಾ ವಿಭಾಗಗಳಲ್ಲಿ ಪ್ರತಿಭಾವಂತರಿದ್ದರೂ, ಸಾಕಷ್ಟು ದಾಖಲೆ ಮಾಡಿದವರಿದ್ದರೂ ಟೀಂ ಇಂಡಿಯಾ ಸೋತಿರುವುದು ಅಭಿಮಾನಿಗಳಿಗೆ ತೀವ್ರ ನಿರಾಶೆ ತಂದಿದೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments