Select Your Language

Notifications

webdunia
webdunia
webdunia
webdunia

ಭಾರತ-ಆಸ್ಟ್ರೇಲಿಯಾ ಟೆಸ್ಟ್: ಗಡಿಬಿಡಿಯಲ್ಲಿ ವಿಕೆಟ್ ಕೈ ಚೆಲ್ಲಿದ ಟೀಂ ಇಂಡಿಯಾ

ಭಾರತ-ಆಸ್ಟ್ರೇಲಿಯಾ ಟೆಸ್ಟ್: ಗಡಿಬಿಡಿಯಲ್ಲಿ ವಿಕೆಟ್ ಕೈ ಚೆಲ್ಲಿದ ಟೀಂ ಇಂಡಿಯಾ
ಅಡಿಲೇಡ್ , ಗುರುವಾರ, 6 ಡಿಸೆಂಬರ್ 2018 (09:09 IST)
ಅಡಿಲೇಡ್: ಒಂದೆಡೆ ಆಸ್ಟ್ರೇಲಿಯನ್ ಬೌಲರ್ ಗಳ ಸಂಘಟಿತ ಹೋರಾಟ. ಇನ್ನೊಂದೆಡೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳ ಯೋಜನೆ ತಪ್ಪಿದ ಬ್ಯಾಟಿಂಗ್.. ಪರಿಣಾಮ ಮೊದಲ ಟೆಸ್ಟ್ ನ ಮೊದಲ ದಿನ ಟೀಂ ಇಂಡಿಯಾ ಅವಸರದಲ್ಲಿ ವಿಕೆಟ್ ಕೈ ಚೆಲ್ಲಿ ಸಂಕಷ್ಟದಲ್ಲಿದೆ.


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅದಕ್ಕೆ ತಕ್ಕಂತೆ ಆಡಲಿಲ್ಲ. ದುರ್ಬಲ ಎದುರಾಳಿಗಳ ಎದುರು ಆಡುವ ರೀತಿಯಲ್ಲಿ ಗಡಿಬಿಡಿಯಲ್ಲಿ ಆಡಿ ವಿಕೆಟ್ ಕೈ ಚೆಲ್ಲುತ್ತಾ ಸಾಗಿದೆ. ಟೆಸ್ಟ್ ಕ್ರಿಕೆಟ್ ನ ಲಕ್ಷಣ ಯಾವುದೇ ಬ್ಯಾಟ್ಸ್ ಮನ್ ನ ಇನಿಂಗ್ಸ್ ನಲ್ಲಿ ಕಾಣಲಿಲ್ಲ. ಅಪಾರ ನಿರೀಕ್ಷೆ ಹೊತ್ತಿದ್ದ ರೋಹಿತ್ ಶರ್ಮಾ ಇನ್ನೂ ಕಿರು ಮಾದರಿ ಕ್ರಿಕೆಟ್ ನ ಗುಂಗಿನಿಂದ ಹೊರಬಂದಂತೆ ಕಾಣಲಿಲ್ಲ.

ಒಂದು ಹಂತದಲ್ಲಿ 19 ರನ್ ಗಳಿಗೇ 3 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ ಶೋಚನೀಯ ಸ್ಥಿತಿ ನೋಡಿದರೆ 100 ರನ್ ಒಳಗೇ ಆಲೌಟ್ ಆಗುವ ಭೀತಿಯಲ್ಲಿತ್ತು. ಆದರೆ ರೋಹಿತ್ 37 ರನ್ ಗಳಿಸಿ ಮೊತ್ತ ಬೆಳೆಯಲು ನೆರವಾದರು. ವಿರಾಟ್ ಕೊಹ್ಲಿ 3 ರನ್ ಗಳಿಸುವಷ್ಟರಲ್ಲಿ ಉಸ್ಮಾನ್ ಖವಾಜ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರೆ, ಕೆಎಲ್ ರಾಹುಲ್, ಮುರಳಿ ವಿಜಯ್ ಎಂದಿನಂತೆ ಮತ್ತೊಂದು ಫ್ಲಾಪ್ ಶೋ ನೀಡಿದರು. ಇತ್ತೀಚೆಗಿನ ವರದಿ ಬಂದಾಗ ಟೀಂ ಇಂಡಿಯಾ ಸ್ಕೋರ್ 5 ವಿಕೆಟ್ ಕಳೆದುಕೊಂಡು 106 ರನ್ ಆಗಿದೆ. ರಿಷಬ್ ಪಂತ್ 16 ಮತ್ತು ಚೇತೇಶ್ವರ ಪೂಜಾರ 23 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಟಗಾರರ ಹೆಸರು ಘೋಷಿಸಿದ ಟೀಂ ಇಂಡಿಯಾ