ವಿರಾಟ್ ಕೊಹ್ಲಿ ಒನ್ ಮ್ಯಾನ್ ಶೋಗೆ ವಿಂಡೀಸ್ ಕೊಟ್ಟ ಶಾಕ್

Webdunia
ಭಾನುವಾರ, 28 ಅಕ್ಟೋಬರ್ 2018 (09:13 IST)
ಪುಣೆ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 43 ರನ್ ಗಳಿಂದ ಸೋತಿದೆ.

ಯಾವತ್ತಿನಂತೆ ಕೊಹ್ಲಿ ಒನ್ ಮ್ಯಾನ್ ಶೋ ಈ ಬಾರಿ ಟೀಂ ಇಂಡಿಯಾ ಪಾಲಿಗೆ ವರ್ಕೌಟ್ ಆಗಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿತ್ತು.

ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಈ ಸಂದರ್ಭದಲ್ಲಿ ಜತೆಯಾದ ಶಿಖರ್ ಧವನ್, ವಿರಾಟ್ ಕೊಹ್ಲಿ ಕೊಂಚ ಹೊತ್ತು ಜತೆಯಾಟವಾಡಿದರೂ ನಂತರ ಒಂದೊಂದೇ ವಿಕೆಟ್ ಗಳು ನಿರಂತರವಾಗಿ ಬಿತ್ತು.

ಇನ್ನೊಂದೆಡೆ ಕೊಹ್ಲಿ ಎಂದಿನಂತೆ ಭರ್ಜರಿ ಆಟವಾಡಿ 107 ರನ್ ಗಳಿಸಿದರು. ಆದರೆ ಅವರಿಗೆ ಸರಿಯಾದ ಜತೆಗಾರ ಸಿಗದೇ ಟೀಂ ಇಂಡಿಯಾ 47.4 ಓವರ್ ಗಳಲ್ಲೇ 240 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ವಿಂಡೀಸ್ ಬೌಲರ್ ಗಳ ಸಂಘಟಿತ ದಾಳಿಯೆದುರು ಟೀಂ ಇಂಡಿಯಾ ಮಕಾಡೆ ಮಲಗಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿವೃತ್ತಿ ಜೀವನವನ್ನು ಮುಂಬೈನಲ್ಲೇ ಕಳೆಯುತ್ತಾರಾ ಕಿಂಗ್ ಕೊಹ್ಲಿ, ಕುತೂಹಲ ಮೂಡಿಸಿದ ವಿರುಷ್ಕಾ ನಡೆ

WPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಇಂದು ಕಠಿಣ ಎದುರಾಳಿ

ಐದು ವರ್ಷಗಳ ಬಳಿಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ವಿರಾಟ್‌ ಕೊಹ್ಲಿ: ರೋಹಿತ್‌ ಶರ್ಮಾಗೆ ಶಾಕ್‌

IND vs NZ: ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಟೀಂ ಇಂಡಿಯಾಗೆ ಕಾಡುತ್ತಿದೆ ಈ ಬೌಲರ್ ನ ಕೊರತೆ

IND vs NZ: ಒತ್ತಡದಲ್ಲಿ ಆಡಿ ಶತಕ ಗಳಿಸಿದ ಕೆಎಲ್ ರಾಹುಲ್ ಗೆ ಬಹುಪರಾಕ್

ಮುಂದಿನ ಸುದ್ದಿ
Show comments