Publish Date: Sun, 26 Jun 2022 (08:20 IST)
Updated Date: Sun, 26 Jun 2022 (08:57 IST)
ಡುಬ್ಲಿನ್: ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಪಡೆ ಇಂದು ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ಆಡಲಿದೆ.
ಎರಡು ಪಂದ್ಯಗಳ ಕಿರು ಟಿ20 ಸರಣಿ ಆಡಲು ಹಾರ್ದಿಕ್ ಪಾಂಡ್ಯ ಪಡೆ ಐರ್ಲೆಂಡ್ ಗೆ ಪ್ರಯಾಣ ಬೆಳೆಸಿದೆ. ಈ ಪಂದ್ಯ ಡುಬ್ಲಿನ್ ನಲ್ಲಿ ನಡೆಯಲಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾದಲ್ಲಿ ಯುವ ಆಟಗಾರರೇ ಇದ್ದಾರೆ. ಅದರಲ್ಲೂ ಐಪಿಎಲ್ ನಲ್ಲಿ ಮಿಂಚಿದ್ದ ಋತುರಾಜ್ ಗಾಯಕ್ ವಾಡ್, ಸಂಜು ಸ್ಯಾಮ್ಸನ್, ವೆಂಕಟೇಶ್ ಅಯ್ಯರ್, ಇಶಾನ್ ಕಿಶನ್ ಮುಂತಾದ ಪ್ರತಿಭಾವಂತರಿಗೆ ರಾಷ್ಟ್ರೀಯ ತಂಡದಲ್ಲಿ ಮಿಂಚಲು ಉತ್ತಮ ವೇದಿಕೆ ಸಿಕ್ಕಂತಾಗಿದೆ. ಇನ್ನು, ಗಾಯದಿಂದಾಗಿ ಐಪಿಎಲ್ ನಿಂದ ಹೊರಗುಳಿದಿದ್ದ ಸೂರ್ಯಕುಮಾರ್ ಯಾದವ್ ಈಗ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಯುವ ಆಟಗಾರರು ಯಾವ ರೀತಿ ಅವಕಾಶ ಬಳಸಿಕೊಳ್ಳುತ್ತಾರೆ ಎನ್ನುವುದು ನೋಡಬೇಕಿದೆ. ಈ ಪಂದ್ಯ ರಾತ್ರಿ 8.30 ಕ್ಕೆ ಆರಂಭವಾಗಲಿದೆ.