Select Your Language

Notifications

webdunia
webdunia
webdunia
Monday, 14 April 2025
webdunia

ರಣಜಿ ಟ್ರೋಫಿ ಫೈನಲ್: ಮಧ್ಯಪ್ರದೇಶಕ್ಕೆ ಗೆಲುವಿನ ಕನಸು

ರಣಜಿ ಟ್ರೋಫಿ ಕ್ರಿಕೆಟ್
ಬೆಂಗಳೂರು , ಶನಿವಾರ, 25 ಜೂನ್ 2022 (17:37 IST)
ಬೆಂಗಳೂರು: ಚಿನ್ನಸ್ವಾಮಿ ಅಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಧ‍್ಯಪ್ರದೇಶಕ್ಕೆ ಗೆಲುವಿನ ಕನಸು ಮೂಡಿದೆ.

ನಾಲ್ಕನೇ ದಿನದಾಟದಲ್ಲಿ ಮಧ‍್ಯಪ್ರದೇಶ ಮೊದಲ ಇನಿಂಗ್ಸ್ ನಲ್ಲಿ 536 ರನ್ ಗಳಿಗೆ ಆಲೌಟ್ ಆಗಿ 162 ರನ್ ಗಳ ಭರ್ಜರಿ ಮುನ್ನಡೆ ಪಡೆಯಿತು. ಮಧ್ಯಪ್ರದೇಶ ಪರ ಯಶ್ ದುಬೆ (133), ಶುಭಂ ಶರ್ಮ (116), ರಜತ್ ಪಟಿದಾರ್ (122) ಶತಕ ಗಳಿಸಿದರು. ಮುಂಬೈ ಪರ ಶಂಸ್ ಮುಲಾನಿ ಐದು  ವಿಕೆಟ್ ಗಳ ಗೊಂಚಲು ಪಡೆದರು.

ಇದೀಗ ದ್ವಿತೀಯ ಇನಿಂಗ್ಸ್ ಆಡುತ್ತಿರುವ ಮುಂಬೈ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ101  ರನ್ ಗಳಿಸಿದೆ. ನಾಯಕ ಪೃಥ್ವಿ ಶಾ 44, ಹಾರ್ದಿಕ್ ತಮೋರೆ 25 ರನ್ ಗಳಿಸಿ ಔಟಾಗಿದ್ದಾರೆ. ಇದೀಗ 23 ರನ್ ಗಳಿಸಿರುವ ಅರ್ಮಾನ್ ಜಾಫರ್ ಮತ್ತು 4 ರನ್ ಗಳಿಸಿರುವ ಸುವೇದ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮುಂಬೈ ಇನ್ನೂ 61 ರನ್ ಗಳ ಹಿನ್ನಡೆಯಲ್ಲಿದೆ. ನಾಳೆ ಅಂತಿಮ ದಿನವಾಗಿದ್ದು, ಮುಂಬೈ ಬೇಗನೇ ಆಲೌಟ್ ಆಗಿ ಮಧ‍್ಯಪ್ರದೇಶಕ್ಕೆ ಚೇಸ್ ಮಾಡಲು ಕಡಿಮೆ ಮೊತ್ತ ಸಿಕ್ಕರೆ ಗೆಲುವು ಅಸಾಧ‍್ಯವಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕೋಚ್ ಆಗಿ ಚಾರ್ಜ್ ಪಡೆದುಕೊಂಡ ವಿವಿಎಸ್ ಲಕ್ಷ್ಮಣ್