Webdunia - Bharat's app for daily news and videos

Install App

ಅಪರೂಪಕ್ಕೆ ಒತ್ತಡಕ್ಕೆ ಸಿಲುಕಿದ ಟೀಂ ಇಂಡಿಯಾ

Webdunia
ಬುಧವಾರ, 25 ಅಕ್ಟೋಬರ್ 2017 (09:26 IST)
ಪುಣೆ: ಇತ್ತೀಚೆಗಿನ ದಿನಗಳಲ್ಲಿ ಸೋಲೇ ಗೊತ್ತಿರದವರಂತೆ ಮೆರೆಯುತ್ತಿದ್ದ ಟೀಂ ಇಂಡಿಯಾ ಆಟಗಾರರಿಗೆ ಮೊದಲ ಪಂದ್ಯದಲ್ಲೇ ಶಾಕ್ ನೀಡಿದ ನ್ಯೂಜಿಲೆಂಡ್ ಪಡೆ ಇದೀಗ ಗೆಲುವಿನ ಒತ್ತಡಕ್ಕೆ ನೂಕಿದೆ.

 
ಇಂದು ಕೀವೀಸ್ ವಿರುದ್ಧ ಟೀಂ ಇಂಡಿಯಾ ಪುಣೆಯಲ್ಲಿ ದ್ವಿತೀಯ ಏಕದಿನ ಪಂದ್ಯವಾಡುತ್ತಿದೆ. ಕಳೆದ ಪಂದ್ಯದಲ್ಲಿ ಭಾರತೀಯರು ಎಲ್ಲಾ ವಿಭಾಗದಲ್ಲಿ ವಿಫಲರಾಗಿ ಸೋಲನುಭವಿಸಿದ್ದರು. ಈ ಪಂದ್ಯವನ್ನು ಗೆಲ್ಲದಿದ್ದರೆ, ಮೂರು ಪಂದ್ಯಗಳ ಸರಣಿ ಕೈ ತಪ್ಪುವುದು. ಅಷ್ಟೇ ಅಲ್ಲ, ಎಷ್ಟೋ ದಿನಗಳ ನಂತರ ಸರಣಿ ಸೋಲು ಎದುರಿಸಬೇಕಾಗಬಹುದು.

ಕಳೆದ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ ಆಡಿರಲಿಲ್ಲ. ಈ ಪಂದ್ಯದಲ್ಲಿ ಅವರಿಗೆ ಸ್ಥಾನ ಲಭ್ಯವಾಗುವ ನಿರೀಕ್ಷೆಯಿದೆ. ಕಳೆದ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ದೊರಕಿರಲಿಲ್ಲ. ಇದು ಕೂಡಾ ಬ್ಯಾಟಿಂಗ್ ಮತ್ತು ಸ್ಪಿನ್ನರ್ ಗಳಿಗೆ ನೆರವಾಗುವ ಪಿಚ್ ಆಗಿರುವುದರಿಂದ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಸ್ಪಿನ್ನರ್ ಗಳೂ ಲಯ ಕಂಡುಕೊಳ್ಳಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಅಫ್ಘಾನಿಸ್ತಾನವನ್ನು ಚಚ್ಚಿ ಬಿಸಾಕಿದ ಅಭಿಷೇಕ್ ಶರ್ಮಾ

Asia Cup Final: ಏಷ್ಯಾ ಕಪ್ ಗೆಲ್ಲಲು ದೊಡ್ಡ ಗುರಿ ನೀಡಲು ಸಹಾಯ ಮಾಡಿದ ಶಫಾಲಿ ವರ್ಮ, ಸ್ಮೃತಿ ಮಂಧಾನ

ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ ಭಾರತ-ಅಫ್ಗನ್‌ ಟಿ20 ಕದನ: ಶ್ರೇಯಸ್‌ ಅಯ್ಯರ್‌ ನಾಯಕತ್ವಕ್ಕೆ ಮತ್ತೆ ಅಗ್ನಿಪರೀಕ್ಷೆ

ಮಹಿಳಾ ಏಷ್ಯಾಕಪ್ ಫೈನಲ್ ಇಂದು: ಲಂಕಾ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಹರ್ಮನ್‌ಪ್ರೀತ್‌ ಕೌರ್‌ ಕಾತರ

ಕೌಂಟಿ ಕ್ರಿಕೆಟ್‌ನಲ್ಲಿ ಜಾದೂ ಮಾಡಿದ ಕುಲದೀಪ್‌: ಭಾರತ ತಂಡದಿಂದ ನಿರ್ಲಕ್ಷಿಸಿದಕ್ಕೆ ಆಯ್ಕೆ ಮಂಡಳಿಗೆ ಸಂದೇಶ ರವಾನೆ

ಮುಂದಿನ ಸುದ್ದಿ
Show comments