Select Your Language

Notifications

webdunia
webdunia
webdunia
webdunia

ವಿಶ್ವಕಪ್ ಹೀರೋಗೆ ಶಾಕ್: ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಸಂಜು ಸ್ಯಾಮ್ಸನ್ ಗೆ ಕೊಕ್

Sanju Samson
ಮುಂಬೈ: ಜಿಂಬಾಬ್ವೆ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಘೋಷಣೆಯಾಗಿದ್ದು ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್ ಗೆ ತಂಡದಿಂದಲೇ ಕೊಕ್ ನೀಡಲಾಗಿದೆ.

ಜುಲೈ 23 ರಿಂದ ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ 15 ಸದಸ್ಯರ ಟೀಂ ಇಂಡಿಯಾ ಘೋಷಣೆ ಮಾಡಲಾಗಿದೆ. ಈ ತಂಡಕ್ಕೆ ತಿಲಕ್ ವರ್ಮ ಉಪನಾಯಕರಾಗಿದ್ದಾರೆ.

ಆದರೆ ಅಭಿಮಾನಿಗಳಿಗೆ ಸಂಜು ಸ್ಯಾಮ್ಸನ್ ಆಯ್ಕೆ ಮಾಡದೇ ಇರುವುದು ಶಾಕ್ ತಂದಿದೆ. ಐರ್ಲೆಂಡ್ ಸರಣಿಯಲ್ಲಿ ಪೇಲವ ಪ್ರದರ್ಶನ ತೋರಿದ್ದ ಸಂಜು ಸ್ಯಾಮ್ಸನ್ ಗೆ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಸತತ ಕಳಪೆ ಪ್ರದರ್ಶನ ನೀಡಿದ್ದ ಅವರಿಗೆ ಈಗ ಜಿಂಬಾಬ್ವೆ ತಂಡದಿಂದಲೇ ಕೊಕ್ ನೀಡಲಾಗಿದೆ.

ಜುಲೈ 23, 25 ಮತ್ತು 26 ರಂದು ಹರಾರೆಯಲ್ಲಿ ಮೂರು ಪಂದ್ಯಗಳ ಸರಣಿ ನಡೆಯಲಿದೆ. ಈ ತಂಡದಲ್ಲಿ ಸೆನ್ಸೇಷನಲ್ ಆರಂಭಿಕ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿದ್ದ ರವಿ ಬಿಷ್ಣೋಯ್ ಗೆ ಕೊಕ್ ನೀಡಲಾಗಿದೆ. ಹರ್ಷ್ ದುಬೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಅನುಭವಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷ್ ದೀಪ್ ಸಿಂಗ್ ರನ್ನು ಕಡೆಗಣಿಸಲಾಗಿದೆ.

ಉಳಿದಂತೆ ತಂಡ ಇಂತಿದೆ: ಶ್ರೇಯಸ್ ಅಯ್ಯರ್ (ಕ್ಯಾಪ್ಟನ್), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮ, ಮಯಾಂಕ್ ಯಾದವ್,  ಪ್ರಭಿಸ್ಮರಣ್ ಸಿಂಗ್ (ವಿಕೆಟ್ ಕೀಪರ್).

Share this Story:

Follow Webdunia kannada

ಮುಂದಿನ ಸುದ್ದಿ

ಅಟೋಗ್ರಾಫ್ ಗಾಗಿ ಅಭಿಮಾನಿ ಕೊಟ್ಟ ಪೆನ್ನು ಸರಿ ಇರಲಿಲ್ಲವೆಂದು ವೈಭವ್ ಸೂರ್ಯವಂಶಿ ಮಾಡಿದ್ದೇನು ಗೊತ್ತಾ Video