Publish Date: Tue, 19 May 2026 (10:14 IST)
Updated Date: Tue, 19 May 2026 (10:19 IST)
ಚೆನ್ನೈ: ಐಪಿಎಲ್ 2026 ರ ನಿನ್ನೆಯ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಧೋನಿ ರೀತಿ ಮಿಂಚಿನಂತೆ ಸ್ಟಂಪ್ ಔಟ್ ಮಾಡಿದ ಸಂಜು ಸ್ಯಾಮ್ಸನ್ ವಿರುದ್ಧ ಹೈದರಾಬಾದ್ ಬ್ಯಾಟಿಗ ಹೆನ್ರಿಚ್ ಕ್ಲಾಸನ್ ಕಿರಿಕ್ ಮಾಡಿಕೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಸಂಜು ಸ್ಯಾಮ್ಸನ್ ಮೈದಾನದಲ್ಲಿ ಕಿರಿಕ್ ಮಾಡಿಕೊಳ್ಳುವವರೇ ಅಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಕೂಲ್ ಆಗಿರುತ್ತಾರೆ. ತಾವೇ ಶತಕ ಗಳಿಸಿದಾಗಲೂ ಆಕ್ರಮಣಕಾರಿಯಾಗಿ ಸೆಲೆಬ್ರೇಷನ್ ಕೂಡಾ ಮಾಡಲ್ಲ.
ಆದರೆ ನಿನ್ನೆಯ ಪಂದ್ಯದಲ್ಲಿ ಕ್ಲಾಸನ್ ರನ್ನು ಅದ್ಭುತವಾಗಿ ಸ್ಟಂಪ್ ಔಟ್ ಮಾಡಿದ ಸಂಜು ತಮ್ಮ ಸಹ ಆಟಗಾರರೊಂದಿಗೆ ಸೆಲೆಬ್ರೇಷನ್ ಮಾಡುತ್ತಿದ್ದರು. ಈ ವೇಳೆ ಪೆವಿಲಿಯನ್ ಗೆ ಸಾಗುತ್ತಿದ್ದ ಕ್ಲಾಸನ್ ಜೊತೆ ಮಾತಿನ ಚಕಮಕಿಯಾಗಿದೆ.
ಯಾವ ಮಟ್ಟಿಗೆ ಎಂದರೆ ಸಂಜುರನ್ನು ಸಹ ಆಟಗಾರರು ತಡೆದು ನಿಲ್ಲಿಸಬೇಕಾಯಿತು. ಬಳಿಕ ಅಂಪಾಯರ್ ಕೂಡಾ ಮಧ್ಯಪ್ರವೇಶ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ