ಆರಂಭಿಕರು ಮಾಡಿದ ತಪ್ಪಿಗೆ ವಿರಾಟ್ ಕೊಹ್ಲಿ ಬೆಲೆ ತೆರಬೇಕಾಗಿದೆ!

Webdunia
ಗುರುವಾರ, 2 ಆಗಸ್ಟ್ 2018 (17:35 IST)
ಎಡ್ಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಉತ್ತಮ ಆರಂಭದ ಹೊರತಾಗಿಯೂ ಭೋಜನ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 73 ರನ್ ಗಳಿಸಿದೆ.
 

ಭಾರತದ ಆರಂಭ ನೋಡಿದರೆ ಇಂಗ್ಲೆಂಡ್ ಗೆ ದಿಟ್ಟ ಉತ್ತರ ಗ್ಯಾರಂಟಿ ಎನ್ನುವ ಹಾಗಿತ್ತು. ಶಿಖರ್ ಧವನ್ ಕೂಡಾ ಉತ್ತಮವಾಗಿಯೇ ಆಡುತ್ತಿದ್ದರು. ಆದರೆ ಇನ್ನೇನು ಲಯಕ್ಕೆ ಬರುತ್ತಿದ್ದಾರೆ ಎನ್ನುವಾಗ ವಿಕೆಟ್ ಕಳೆದುಕೊಂಡರು.

ಮುರಳಿ ವಿಜಯ್ 20 ರನ್ ಗಳಿಸಿದರೆ ಧವನ್ 26 ರನ್ ಗಳಿಸಿ ಔಟಾದರು. ಬಳಿಕ ಬಂದ ಕೆಎಲ್ ರಾಹುಲ್ ಇಂದು ಯಾವುದೇ ಮೋಡಿ ಮಾಡಿಲ್ಲ. ಕೇವಲ 4 ರನ್ ಗಳಿಗೆ ಔಟಾಗಿ ಪೆವಿಲಿಯನ್ ಸೇರಿಕೊಂಡರು.

ಹೀಗಾಗಿ ಇನಿಂಗ್ಸ್ ಮುನ್ನಡೆಸುವ ಜವಾಬ್ಧಾರಿ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರೆಹಾನೆ ಮೇಲೆ ಬಿತ್ತು. ಊಟದ ವಿರಾಮದ ವೇಳೆಗೆ 9 ರನ್ ಗಳಿಸಿರುವ ಕೊಹ್ಲಿ ಮತ್ತು 8 ರನ್ ಗಳಿಸಿರುವ ರೆಹಾನೆ ಕ್ರೀಸ್ ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶುಭಮನ್ ಗಿಲ್ ತಂಡದಿಂದ ನಿಜಕ್ಕೂ ಕಿತ್ತು ಹಾಕಿದ್ದು ಯಾರು, ಹರಿದಾಡ್ತಿದೆ ಹೊಸ ಸುದ್ದಿ

ವಿರಾಟ್ ಕೊಹ್ಲಿ ಆಗಕ್ಕೆ ಹೊರಟ್ರು... ಶುಭಮನ್ ಗಿಲ್ ಟ್ರೋಲ್

Women's T20: ಏಕದಿನ ವಿಶ್ವಕಪ್‌ ವಿಜೇತ ಹರ್ಮನ್‌ಪ್ರೀತ್‌ ಪಡೆಗೆ ಇಂದಿನಿಂದ ಮತ್ತೊಂದು ಅಗ್ನಿಪರೀಕ್ಷೆ

ಅಬ್ಬಾ.. ಫಸ್ಟ್ ಟೈಂ ಅಜಿತ್ ಅಗರ್ಕರ್, ಗಂಭೀರ್ ಒಳ್ಳೆ ನಿರ್ಧಾರ ಮಾಡಿದ್ರು

ಐಸಿಸಿ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಘೋಷಣೆ: ಗಂಭೀರ್ ಮೆಚ್ಚಿನ ಆಟಗಾರನಿಗೇ ಕೊಕ್

ಮುಂದಿನ ಸುದ್ದಿ
Show comments