Publish Date: Thu, 02 Aug 2018 (16:00 IST)
Updated Date: Thu, 02 Aug 2018 (16:01 IST)
ಎಡ್ಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳನ್ನು ಆಂಗ್ಲರನ್ನು ಕೇವಲ 287 ರನ್ ಗಳಿಗೆ ಆಲೌಟ್ ಮಾಡಿದ್ದಾರೆ.
ನಿನ್ನೆ 285 ರನ್ ಗಳಿಗೆ ದಿನದಾಟ ಮುಗಿಸಿದ್ದ ಇಂಗ್ಲೆಂಡ್ ಇಂದು ಆ ಮೊತ್ತಕ್ಕೆ ಎರಡು ರನ್ ಸೇರಿಸುವಷ್ಟರಲ್ಲಿ ಉಳಿದಿದ್ದ ಕೊನೆಯ ವಿಕೆಟ್ ಕಳೆದುಕೊಂಡಿತು. ಭಾರತಕ್ಕೆ ದ್ವಿತೀಯ ದಿನದ ಆರಂಭದಲ್ಲೇ ಬ್ರೇಕ್ ಕೊಟ್ಟಿದ್ದು ಮೊಹಮ್ಮದ್ ಶಮಿ. ಇದರೊಂದಿಗೆ ಶಮಿ ಮೂರು ವಿಕೆಟ್ ಕಿತ್ತರು.
ಇತ್ತೀಚೆಗಿನ ವರದಿ ಬಂದಾಗ ಟೀಂ ಇಂಡಿಯಾ ಉತ್ತಮವಾಗಿಯೇ ಆರಂಭ ಮಾಡಿದ್ದು, ವಿಕೆಟ್ ನಷ್ಟವಿಲ್ಲದೇ 12 ರನ್ ಗಳಿಸಿದೆ. ಧವನ್ ಮತ್ತು ಮುರಳಿ ವಿಜಯ್ ಕ್ರೀಸ್ ನಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.