Daily Horoscope
✕

ಭಾರತ-ಆಸ್ಟ್ರೇಲಿಯಾ ಏಕದಿನ: ಟೀಂ ಇಂಡಿಯಾ 255 ಕ್ಕೆ ಆಲೌಟ್

Webdunia
ಮಂಗಳವಾರ, 14 ಜನವರಿ 2020 (17:47 IST)
ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿಗೆ ಗೆಲ್ಲಲು 256 ರನ್ ಗಳ ಸುಲಭ ಗುರಿ ನೀಡಿದೆ.


ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತದ ಆರಂಭವೇ ಉತ್ತಮವಾಗಿರಲಿಲ್ಲ. ರೋಹಿತ್ ಶರ್ಮಾ 10 ರನ್ ಗಳಿಸಿ ನಿರ್ಗಮಿಸಿದಾಗಲೇ ರನ್ ವೇಗಕ್ಕೆ ಕಡಿವಾಣ ಬಿತ್ತು. ಆದರೆ ಅದಾದ ಬಳಿಕ ಶಿಖರ್ ಧವನ್ ಮತ್ತು ಕೆಎಲ್ ರಾಹುಲ್ ಉತ್ತಮ ಜತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.

ಆದರೆ 47 ರನ್ ಗಳಿಸಿದಾಗ ರಾಹುಲ್ ಔಟಾದರೆ ಅವರ ಬೆನ್ನಿಗೇ 74 ರನ್ ಗಳಿಸಿದ್ದ ಧವನ್ ಕೂಡಾ ಪೆವಿಲಿಯನ್ ಗೆ ಸೇರಿಕೊಂಡರು. ಬ್ಯಾಟಿಂಗ್ ನಲ್ಲಿ ಹಿಂಬಡ್ತಿ ಪಡೆದ ನಾಯಕ ಕೊಹ್ಲಿ ಕೇವಲ 16 ರನ್ ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ರಿಷಬ್ ಪಂತ್ (28) ಮತ್ತು ರವೀಂದ್ರ ಜಡೇಜಾ (25) ಕೊಂಚ ಸುಧಾರಣೆ ತಂದರೂ ಇವರಿಂದಲೂ ಮೊತ್ತ ಉಬ್ಬಿಸಲು ಸಾಧ‍್ಯವಾಗಲಿಲ್ಲ. ಅಂತಿಮವಾಗಿ ಭಾರತ 49.1 ಓವರ್ ಗಳಲ್ಲಿ 255 ಕ್ಕೆ ಆಲೌಟ್ ಆಯಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs NZ: ಆಡುವ ಅವಕಾಶವಿಲ್ಲ ಎಂದರೂ ದೇವರೇ ವೈಭವ್ ಸೂರ್ಯವಂಶಿಗೆ ಒಂದು ಅವಕಾಶ ಮಾಡಿಕೊಡ್ತಿದ್ದಾನೆ..

IND vs NZ 1st T20: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 4 ವಿಕೆಟ್‌ಗಳ ರೋಚಕ ಜಯ

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಇಂದು; ಸಮಯ ಮತ್ತು ನೇರಪ್ರಸಾರದ ಸಂಪೂರ್ಣ ವಿವರ

ಜಿಂಬಾಬ್ವೆ ವಿರುದ್ಧ ಅಜೇಯ 91 ರನ್ ಗಳಿಸಿದ ಬಳಿಕ ಭಾವುಕರಾದ ಹರ್ಮನ್‌ಪ್ರೀತ್ ಕೌರ್: ಕಣ್ಣೀರಿಗೆ ಅಸಲಿ ಕಾರಣವೇನು Video

ನಿಮಗೆ ಏನು ಬೇಕೋ ಮಾಡ್ತೀನಿ… ಅಭಿಮಾನಿ ಜೊತೆ ಹಾರ್ದಿಕ್ ಪಾಂಡ್ಯ ನಡೆದುಕೊಂಡ ರೀತಿಗೆ ನೆಟ್ಟಿಗರು ಫಿದಾ Video

ಮುಂದಿನ ಸುದ್ದಿ
Show comments