ತಿರುಮಲ (ಆಂಧ್ರಪ್ರದೇಶ): ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ತಮ್ಮ ಕುಟುಂಬದೊಂದಿಗೆ ತಿರುಪತಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಗೌತಮ್ ಗಂಭೀರ್ ಅವರು ಪತ್ನಿ ಹಾಗೂ ಪುತ್ರಿಯರ ಸಮೇತರಾಗಿ ತಿರುಪತಿಗೆ ಭೇಟಿ ನೀಡಿದ್ದಾರೆ.
ಗೌತಮ್ ಅವರಿಗೆ ಈಚೆಗೆ ಜೀವಬೆದರಿಕೆಯೊಡ್ಡಲಾಯಿತು. ಐಎಸ್‌ಐಎಸ್ ಕಾಶ್ಮೀರ ಎನ್ನುವ ಹೆಸರಿನಿಂದ ನಿನ್ನನ್ನು ಕೊಲ್ಲುತ್ತೇನೆ ಎಂದು ಎರಡು ಬಾರಿ ಗೌತಮ್ ಗಂಭೀರ್‌ಗೆ ಜೀವಬೆದರಿಕೆ ಹಾಕಲಾಗಿದೆ. ಇದೀಗ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಫಾದಕರ ದಾಳಿ ದಿನವೇ ಈ ಸಂದೇಶ ಗೌತಮ್ ಗಂಭೀರ್‌ಗೆ ಬಂದಿದೆ. ಸ್ವತಃ ಗಂಭೀರ್ ಅವರೇ ಈ ಸಂಬಂಧ ದೂರು ನೀಡಿದ್ದಾರೆ.