Select Your Language

Notifications

webdunia
webdunia
webdunia
webdunia

TATA IPL, KKR vs SRH: ಹೈದಾರಾಬಾದ್‌ಗೆ 201 ರನ್‌ಗಳ ಟಾರ್ಗೇಟ್ ನೀಡಿದ ಕೆಕೆಆರ್‌

TATA IPL 2025

Sampriya

ಬೆಂಗಳೂರು , ಗುರುವಾರ, 3 ಏಪ್ರಿಲ್ 2025 (21:32 IST)
Photo Courtesy X
ಬೆಂಗಳೂರು: . ಐಪಿಎಲ್ 2024 ರ ಫೈನಲಿಸ್ಟ್‌ಗಳು ಇಂದು ಕೋಲ್ಕತ್ತಾದ ಈರ್ಡನ್ ಗಾರ್ಡನ್ ಮೈದಾನದಲ್ಲಿ ಮುಖಾಮುಖಿಯಾಗಿದೆ. ಇದೀಗ ಮೊದಲ ಇನ್ನಿಂಗ್ಸ್‌ನಲ್ಲಿ ಕೆಕೆಆರ್‌  6ವಿಕೆಟ್ ಕಳೆದುಕೊಂಡು 200ರನ್ ಗಳಿಸಿತು.

ಇದರಿಂದ ಹೈದಾರಾಬಾದ್‌ ಗೆಲುವಿಗೆ 201 ರನ್‌ಗಳ ಟಾರ್ಗೇಟ್‌ ಅನ್ನು ಕೆಕೆಆರ್ ನೀಡಿತು.  ಸನ್‌ರೈಸರ್ಸ್‌ ಹೈದರಾಬಾದ್‌ ಟಾಸ್ ಗೆದ್ದು ಮೊದಲು ಪೀಲ್ಡಿಂಗ್ ಆಯ್ದುಕೊಂಡಿತು.  ಈ ಮೂಲಕ ಕೆಕೆಆರ್‌ ಅನ್ನು ಬ್ಯಾಟಿಂಗ್‌ ಆಹ್ವಾನಿಸಿತು.

ಕೆಕೆಆರ್‌ ಆಟಗಾರರು ಡಿ ಕಾಕ್‌(1), ಸುನಿಲ್ ನರೇನಾ(7), ರಹಾನೆ(38), ರಘುವಂಶಿ(50), ವೆಂಕಟೇಶ್‌(60), ರಿಂಕು ಸಿಂಗ್‌(32)ರಸ್ಸೆಲ್‌(1) ರನ್‌ ಪಡೆದು 20 ಓವರ್‌ಳಲ್ಲಿ 200ರನ್ ಗಳಿಸಿದರು.

ಪ್ರಸ್ತುತ ಅಂಕಪಟ್ಟಿಯಲ್ಲಿ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಎಸ್‌ಆರ್‌ಹೆಚ್ ಎಂಟನೇ ಮತ್ತು ಅಜಿಂಕ್ಯಾ ರಹಾನೆ ಮುನ್ನಡೆಸುತ್ತಿರುವ ಕೆಕೆಆರ್ ಹತ್ತನೇ ಸ್ಥಾನದಲ್ಲಿದೆ. ಈ ಪಂದ್ಯಾಟದಲ್ಲಿ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು  ಟಾಪ್‌ನಲ್ಲಿಡುವ ಪ್ಲ್ಯಾನ್‌ನೊಂದಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತೀ ಸುಂದರಿ ನನ್ನ ಗೆಳತಿ: ಮೊದಲ ಮದುವೆಯ ಕಹಿ ಮರೆತು ಮತ್ತೇ ಪ್ರೀತಿಯಲ್ಲಿ ಬಿದ್ದ ಶಿಖರ್ ಧವನ್