Select Your Language

Notifications

webdunia
webdunia
webdunia
webdunia

IPL 2024: ಎಸ್ ಆರ್ ಎಚ್ ಸೋಲಿನ ಬಳಿಕ ಇಷ್ಟು ದಿನ ಕುಣಿದಾಡುತ್ತಿದ್ದ ಕಾವ್ಯಾ ಮಾರನ್ ಅಳು

Kavya Maran

Krishnaveni K

ಚೆನ್ನೈ , ಸೋಮವಾರ, 27 ಮೇ 2024 (11:40 IST)
ಚೆನ್ನೈ: ಐಪಿಎಲ್ 2024 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಆಡುವಾಗಲೆಲ್ಲಾ ಕ್ಯಾಮರಾ ಕಣ್ಣುಗಳು ಮಾಲಕಿ ಕಾವ್ಯಾ ಮಾರನ್ ಮೇಲಿರುತ್ತಿತ್ತು. ತಂಡವನ್ನು ಹುರಿದುಂಬಿಸಲು ಪ್ರತೀ ಪಂದ್ಯಕ್ಕೂ ಸ್ಟೇಡಿಯಂಗೆ ಬಂದು ಕೂತಿರುತ್ತಿದ್ದ ಕಾವ್ಯಾ ಮಾರನ್ ಕೆಕೆಆರ್ ವಿರುದ್ಧ ಸೋತ ಬಳಿಕ ಕಣ್ಣೀರು ಹಾಕಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಐಪಿಎಲ್ 2024 ರ ಫೈನಲ್ ಪಂದ್ಯದಲ್ಲಿ ಎಸ್ಆರ್ ಎಚ್ ತಂಡ ಕೆಕೆಆರ್ ವಿರುದ್ಧ 8 ವಿಕೆಟ್ ಗಳಿಂದ ಹೀನಾಯವಾಗಿ ಸೋತಿತು. ಈ ಪಂದ್ಯದಲ್ಲಿ ಎಸ್ಆರ್ ಎಚ್ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಹೀಗಾಗಿ ಮೊದಲ ಇನಿಂಗ್ಸ್ ಮುಗಿದ ಕೂಡಲೇ ಈ ಪಂದ್ಯ ಕೆಕೆಆರ್ ಗೆಲ್ಲುವುದು ಖಚಿತ ಎಂದಾಗಿತ್ತು.

ಹೀಗಾಗಿ ಕಾವ್ಯಾ ಮಾರನ್ ಮುಖದಲ್ಲಿ ನಿರಾಸೆ ಎದ್ದು ಕಾಣುತ್ತಿತ್ತು. ಪ್ರತೀ ಬಾರಿ ಮೈದಾನಕ್ಕೆ ಬಂದು ತಂಡ ಗೆದ್ದಾಗಲೆಲ್ಲಾ ಚಿಕ್ಕಮಗುವಿನಂತೆ ಕುಣಿದಾಡುವ ಕಾವ್ಯಾ ಮಾರನ್ ನಿನ್ನೆಯ ಪಂದ್ಯದ ವೇಳೆ ಮಂಕಾಗಿ ಕೂತಿದ್ದರು.

ಅದರಲ್ಲೂ ತಂಡ ಸೋತಾಗ ಅವರಿಗೆ ಅಳು ತಡೆಯಲಾಗಲಿಲ್ಲ. ಎಚ್ಆರ್ ಎಚ್ ಸೋತ ಬೆನ್ನಲ್ಲೇ ಕಾವ್ಯಾ ಮಾರನ್ ಜೋರಾಗಿ ಅತ್ತಿದ್ದಾರೆ. ಅವರು ಅಳುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಕೆಆರ್ ಐಪಿಎಲ್ ಗೆದ್ದಿದ್ದಕ್ಕೆ ಗೌತಮ್ ಗಂಭೀರ್ ಗೆ ಭಾರೀ ಲಾಭ