Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್:ಗುಂಪು 1 ರಲ್ಲಿ ಇಂಗ್ಲೆಂಡ್ ಟಾಪ್

ಟಿ20 ವಿಶ್ವಕಪ್:ಗುಂಪು 1 ರಲ್ಲಿ ಇಂಗ್ಲೆಂಡ್ ಟಾಪ್
ದುಬೈ , ಗುರುವಾರ, 28 ಅಕ್ಟೋಬರ್ 2021 (09:35 IST)
ದುಬೈ: ಟಿ20 ವಿಶ್ವಕಪ್ ನ ನಿನ್ನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 8 ವಿಕೆಟ್ ಗಳ ಗೆಲುವು ಸಾಧಿಸಿದ ಇಂಗ್ಲೆಂಡ್ ಗುಂಪು 1 ರಲ್ಲಿ ಅಗ್ರ ಸ್ಥಾನಕ್ಕೇರಿದೆ.

ಸತತ ಎರಡು ಗೆಲುವುಗಳಿಂದ ಇಂಗ್ಲೆಂಡ್ ಅಗ್ರಸ್ಥಾನಕ್ಕೇರಿದೆ. ಸದ್ಯಕ್ಕೆ +3.614 ರನ್ ರೇಟ್ ಹೊಂದಿರುವ ಇಂಗ್ಲೆಂಡ್ 4 ಅಂಕ ಸಂಪಾದಿಸಿದೆ.

ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತು. ಇಂಗ್ಲೆಂಡ್ ಈ ಮೊತ್ತವನ್ನು 14.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿ ಗುರಿ ಮುಟ್ಟಿತು. ಜೇಸನ್ ರಾಯ್ 61 ರನ್ ಗಳಿಸಿದರು. ಇದರೊಂದಿಗೆ ಬಾಂಗ್ಲಾದೇಶದ ಮುಂದಿನ ಹಾದಿ ಕಠಿಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖೇಲ್ ರತ್ನ ಅವಾರ್ಡ್ ಗೆ ನೀರಜ್ ಚೋಪ್ರಾ, ಮಿಥಾಲಿ ಹೆಸರು ಮುಂಚೂಣಿಯಲ್ಲಿ