Select Your Language

Notifications

webdunia
webdunia
webdunia
webdunia

ಖೇಲ್ ರತ್ನ ಅವಾರ್ಡ್ ಗೆ ನೀರಜ್ ಚೋಪ್ರಾ, ಮಿಥಾಲಿ ಹೆಸರು ಮುಂಚೂಣಿಯಲ್ಲಿ

ಖೇಲ್ ರತ್ನ ಅವಾರ್ಡ್ ಗೆ ನೀರಜ್ ಚೋಪ್ರಾ, ಮಿಥಾಲಿ ಹೆಸರು ಮುಂಚೂಣಿಯಲ್ಲಿ
ನವದೆಹಲಿ , ಗುರುವಾರ, 28 ಅಕ್ಟೋಬರ್ 2021 (09:25 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಸೇರಿದಂತೆ 11 ಕ್ರೀಡಾ ಪಟುಗಳ ಹೆಸರುಗಳನ್ನು ಈ ಸಾಲಿನ ಪ್ರತಿಷ್ಠಿತ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಇದಲ್ಲದೆ 25 ಕ್ರೀಡಾಳುಗಳ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಿತಿ ನಾಮನಿರ್ದೇಶನಗೊಂಡ ಕ್ರೀಡಾಳುಗಳ ಹೆಸರು ಬಹಿರಂಗಪಡಿಸಿದೆ.

ನೀರಜ್ ಚೋಪ್ರಾ, ಮಿಥಾಲಿ ರಾಜ್ ಅಲ್ಲದೆ, ಫುಟ್ಬಾಲಿಗ ಸುನಿಲ್ ಚೆಟ್ರಿ, ಕುಸ್ತಿ ಪಟು ರವಿ ಕುಮಾರ್ ದಹಿಯಾ, ಹಾಕಿ ಪಟು ಪಿ.ಆರ್. ಶ್ರೀಜೇಶ್, ಪ್ಯಾರಾ ಶೂಟರ್ ಅವನಿ ಲೇಖರಾ ಖೇಲ್ ರತ್ನ ಪ್ರಶಸ್ತಿ ರೇಸ್ ನಲ್ಲಿದ್ದಾರೆ. ಇನ್ನು, ಕ್ರಿಕೆಟಿಗ ಶಿಖರ್ ಧವನ್, ಟಿಟಿ ಆಟಗಾರ್ತಿ ಭವಿನಾ ಪಟೇಲ್, ಸುಹಾಸ್ ಯತಿರಾಜ್, ನಿಶಾದ್ ಕುಮಾರ್ ಹೆಸರುಗಳು ಅರ್ಜುನ ಪ್ರಶಸ್ತಿ ಪಟ್ಟಿಯಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ನಲ್ಲಿ ಟಾಸ್ ಗೆದ್ದವರೇ ಬಾಸ್!