Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ ಗೆ ರೋಹಿತ್ ಇಲ್ಲ ಎನ್ನವುದರ ಸೂಚನೆಯೇ ಇದು?

Rohit Sharma

Krishnaveni K

ಮುಂಬೈ , ಭಾನುವಾರ, 7 ಜನವರಿ 2024 (09:19 IST)
ಮುಂಬೈ: ಮುಂಬರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ನಾಯಕರಾಗಿ ಇರಲ್ಲ ಎನ್ನುವುದರ ಸೂಚನೆಯೊಂದನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ನೀಡಿದೆ.

ಕ್ರಿಕೆಟ್ ನೇರಪ್ರಸಾರಕ ಸಂಸ್ಥೆ ಟಿ20 ವಿಶ್ವಕಪ್ ಕ್ರಿಕೆಟ್ ನ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಈ ಪೈಕಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳಾಪಟ್ಟಿ ಜೊತೆಗೆ ಪಾಕ್ ನೂತನ ನಾಯಕ ಶಾಹಿನ್ ಅಫ್ರಿದಿ ಜೊತೆಗೆ ಹಾರ್ದಿಕ್ ಪಾಂಡ್ಯ ಫೋಟೋ ಪ್ರಕಟಿಸಿದೆ.

ಈ ಮೂಲಕ ಪರೋಕ್ಷವಾಗಿ ಟಿ20 ವಿಶ್ವಕಪ್ ಗೆ ಹಾರ್ದಿಕ್ ನಾಯಕರಾಗಲಿದ್ದಾರೆ ಎಂದು ಸುಳಿವು ನೀಡಿದಂತಾಗಿದೆ. ಇದಕ್ಕೆ ಅಭಿಮಾನಿಗಳಿಂದ ಭಾರೀ ಕಾಮೆಂಟ್ ಬಂದಿದೆ. ರೋಹಿತ್ ಇಲ್ಲ ಎಂಬುದನ್ನು ನೀವೇ ನಿರ್ಧರಿಸಿದರಾ ಎಂದು ಕೆಲವರು ಕೇಳಿದರೆ, ರೋಹಿತ್, ಕೊಹ್ಲಿ ಇಲ್ಲದೇ ಹೋದರೆ ಟಿ20 ವಿಶ್ವಕಪ್ ನೋಡಲ್ಲ ಎನ್ನುತ್ತಿದ್ದಾರೆ.

ಕಳೆದ ಬಾರಿ ಏಕದಿನ ವಿಶ್ವಕಪ್ ಆರಂಭಕ್ಕೆ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಫೋಟೋ ಬದಲು ಸ್ಟಾರ್ ಸ್ಪೋರ್ಟ್ಸ್ ವಿರಾಟ್ ಕೊಹ್ಲಿ ಫೋಟೋ ಪ್ರಕಟಿಸಿ ನೆಟ್ಟಿಗರಿಂದ ಛೀಮಾರಿ ಹಾಕಿಸಿಕೊಂಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಗೆ 20-25 ಆಟಗಾರರನ್ನು ರೆಡಿ ಮಾಡಿಕೊಂಡಿರುವ ಟೀಂ ಇಂಡಿಯಾ