Select Your Language

Notifications

webdunia
webdunia
webdunia
Monday, 7 April 2025
webdunia

South Africa vs India test: ಅಪ್ಪನ 5 ವಿಕೆಟ್ ಸಾಧನೆ ಕಣ್ತುಂಬಿಕೊಂಡ ಬುಮ್ರಾ ಪುತ್ರ

ಭಾರತ-ದ.ಆಫ್ರಿಕಾ ಟೆಸ್ಟ್ ಕ್ರಿಕೆಟ್

Krishnaveni K

ಕೇಪ್ ಟೌನ್ , ಶುಕ್ರವಾರ, 5 ಜನವರಿ 2024 (09:40 IST)
Photo Courtesy: Twitter
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ 6 ವಿಕೆಟ್ ಕಬಳಿಸಿ ದಾಖಲೆ ಮಾಡಿದ್ದರು.

ಅವರ ಈ ಇನಿಂಗ್ಸ್ ನ್ನು ವಿಶೇಷ ವ್ಯಕ್ತಿಯೊಬ್ಬರು ಕಣ್ತುಂಬಿಕೊಂಡಿದ್ದಾರೆ. ಅವರು ಬೇರೆ ಯಾರೂ ಜಸ್ಪ್ರೀತ್ ಬುಮ್ರಾ ಅವರ ಪುತ್ರ. ಬುಮ್ರಾ ಪುತ್ರ ಅಂಗದ್.

ಅಮ್ಮನ ಮಡಿಲಲ್ಲಿ ಮಲಗಿ ಬುಮ್ರಾ ಪುತ್ರ ತಂದೆಯ ಐದು ವಿಕೆಟ್ ಕಬಳಿಸಿದ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡಿದ್ದಾನೆ. ಬುಮ್ರಾ ಪತ್ನಿ ಸಂಜನಾ ಗಣೇಶ್ ಈ ಕ್ಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ಕಬಳಿಸಿದ್ದ ಜಸ್ಪ್ರೀತ್ ಬುಮ್ರಾ ಎರಡನೇ ಇನಿಂಗ್ಸ್ ನಲ್ಲಿ ದಾಖಲೆಯ 6 ವಿಕೆಟ್ ಕಬಳಿಸಿದ್ದರು. ಇದೇ ಮೈದಾನದಲ್ಲಿ ಬುಮ್ರಾ ಟೆಸ್ಟ್ ಕೆರಿಯರ್ ಆರಂಭಿಸಿದ್ದರು. ಇದೇ ಅಂಗಳದಲ್ಲಿ ಇದಕ್ಕೆ ಮೊದಲು 5 ವಿಕೆಟ್ ಕಬಳಿಸಿದ್ದರು. ಮತ್ತೆ ಅದೇ ಅಂಗಳದಲ್ಲಿ 5 ವಿಕೆಟ್ ಸಾಧನೆ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಕೇಪ್ ಟೌನ್ ಪಿಚ್ ಗೆ ಕಳಪೆ ಹಣೆಪಟ್ಟಿ ಸಿಗೋದು ಪಕ್ಕಾ