Select Your Language

Notifications

webdunia
webdunia
webdunia
webdunia

ಡೀನ್ ಎಲ್ಗರ್ ವಿಕೆಟ್ ಸಂಭ್ರಮಿಸಬೇಡಿ: ಕೊಹ್ಲಿ ಸನ್ನೆ ವಿಡಿಯೋ ವೈರಲ್

ಡೀನ್ ಎಲ್ಗರ್ ವಿಕೆಟ್ ಸಂಭ್ರಮಿಸಬೇಡಿ: ಕೊಹ್ಲಿ ಸನ್ನೆ ವಿಡಿಯೋ ವೈರಲ್
ಕೇಪ್ ಟೌನ್ , ಗುರುವಾರ, 4 ಜನವರಿ 2024 (10:15 IST)
Photo Courtesy: Twitter
ಕೇಪ್ ಟೌನ್: ಭಾರತ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ ದ.ಆಫ್ರಿಕಾ ಕ್ರಿಕೆಟಿಗ ಡೀನ್ ಎಲ್ಗರ್ ಪಾಲಿಗೆ ಕೊನೆಯ ಟೆಸ್ಟ್ ಪಂದ್ಯವಾಗಿದೆ.

ಅವರ ವಿದಾಯ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ತೋರಿದ ವರ್ತನೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ಇತರೆ ಟೀಂ ಇಂಡಿಯಾ ಆಟಗಾರರೂ ಎಲ್ಗರ್ ಗೆ ಗೌರವ ಸೂಚಿಸಿ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.

ದ್ವಿತೀಯ ಟೆಸ್ಟ್ ನ ಮೊದಲ ದಿನ ಮೊದಲ ಇನಿಂಗ್ಸ್ ನಲ್ಲಿ ಮುಕೇಶ್ ಕುಮಾರ್ ಬೌಲಿಂಗ್ ನಲ್ಲಿ ಡೀನ್ ಎಲ್ಗರ್ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಔಟಾದರು. ಈ ವೇಳೆ ಕ್ಯಾಚ್ ಪಡೆದ ಕೊಹ್ಲಿ ಹೆಚ್ಚು ಸಂಭ್ರಮಿಸಲಿಲ್ಲ. ಜೊತೆಗೆ ನೆರೆದಿದ್ದ ಪ್ರೇಕ್ಷಕರಿಗೆ ಎಲ್ಗರ್ ಪೆವಿಲಿಯನ್ ಗೆ ತೆರಳುವಾಗ ಗೌರವ ಸೂಚಿಸಿ ಎಂದು ಕೈ ಸನ್ನೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಪೆವಿಲಿಯನ್ ಗೆ ತೆರಳುತ್ತಿದ್ದ ಎಲ್ಗರ್ ಕಡೆಗೆ ಓಡಿ ಬಂದು ಅವರನ್ನು ಅಭಿನಂದಿಸಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರಾದ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮುಂತಾದವರೂ ಕೊಹ್ಲಿಯನ್ನು ಅನುಸರಿಸಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರ ಕ್ರೀಡಾ ಸ್ಪೂರ್ತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

South Africa vs India: ಜೋತು ಬಿದ್ದ ಹೊಟ್ಟೆ, ರೋಹಿತ್ ಶರ್ಮಾ ಗರ್ಭಿಣಿನಾ?!