Select Your Language

Notifications

webdunia
webdunia
webdunia
webdunia

T20 WC: ದೈತ್ಯ ಆಸ್ಟ್ರೇಲಿಯಾವನ್ನೇ ಹೊರದಬ್ಬಿ ಸೂಪರ್ 8 ಕ್ಕೇರಿದ ಶ್ರೀಲಂಕಾ: ಇದಕ್ಕೆಲ್ಲಾ ಆ ಒಬ್ಬರೇ ಕಾರಣ

Pathum Nissanka century
Photo Credit: X
ಪಲ್ಲಿಕೆಲೆ: ಟಿ20 ವಿಶ್ವಕಪ್ ಈ ಬಾರಿ ಹಲವು ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತಿದೆ. ದೈತ್ಯ ಆಸ್ಟ್ರೇಲಿಯಾವನ್ನೇ ಹೊರದಬ್ಬಿದ ಶ್ರೀಲಂಕಾ ಟಿ20 ವಿಶ್ವಕಪ್ ಸೂಪರ್ 8 ಹಂತಕ್ಕೇರಿದೆ.
 

ಭಾರತದ ಬಳಿಕ ಈಗ ಮತ್ತೊಂದು ಅತಿಥೇಯ ರಾಷ್ಟ್ರವಾಗಿರುವ ಲಂಕಾ ಸೂಪರ್ 8ಕ್ಕೇರಿದಂತಾಗಿದೆ. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 181 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 18 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಗೆಲುವು ಸಾಧಿಸಿತು.

ನಿನ್ನೆಯ ಪಂದ್ಯದಲ್ಲಿ ಲಂಕಾ ಫೀಲ್ಡಿಂಗ್ ಅಮೋಘವಾಗಿತ್ತು. ಬೌಲಿಂಗ್ ನಲ್ಲಿ ದುಷನ್ ಹೇಮಂತ 3 ವಿಕೆಟ್ ಕಿತ್ತರೆ ಗ್ಲೆನ್ ಮ್ಯಾಕ್ಸ್ ವೆಲ್ ನೀಡಿದ ಕ್ಯಾಚ್ ನ್ನು ಪಥುಮ್ ನಿಸಂಕಾ ಹಾರಿ ಹಿಡಿದ ರೀತಿ ಅಮೋಘವಾಗಿತ್ತು. ಇನ್ನು ಬ್ಯಾಟಿಂಗ್ ನಲ್ಲೂ ಮಿಂಚಿದ ಆರಂಭಿಕ ಪಥುಮ್ ನಿಸಂಕಾ ಅಜೇಯವಾಗಿ 100 ರನ್ ಗಳಿಸಿದರು. ಕುಶಲ್ ಮೆಂಡಿಸ್ 51 ರನ್ ಗಳ ಇನಿಂಗ್ಸ್ ಆಡಿದರು.

ಶ್ರೀಲಂಕಾ ಒಂದು ರೀತಿಯಲ್ಲಿ ನಿರ್ಭೀತ ಕ್ರಿಕೆಟ್ ಆಡುತ್ತಿದ್ದಾರೆ. ಇದೇ ಕಾರಣಕ್ಕೆ ಇತ್ತೀಚೆಗಿನ ದಿನಗಳಲ್ಲಿ ಸೀಮಿತ ಓವರ್ ಗಳಲ್ಲಿ ಲಂಕಾ ಅದ್ಭುತ ಪ್ರದರ್ಶನ ನೀಡುತ್ತಿದೆ. ಇದಕ್ಕೆ ಕಾರಣ ಕೋಚ್ ಸನತ್ ಜಯಸೂರ್ಯ. ಆಟಗಾರನಾಗಿದ್ದಾಗಲೂ ಸ್ಪೋಟಕ ಆರಂಭ ನೀಡಿ ಲಂಕಾವನ್ನು ಗೆಲ್ಲಿಸುತ್ತಿದ್ದ ಸನತ್ ಜಯಸೂರ್ಯ ಈಗ ಕೋಚ್ ಆಗಿಯೂ ಯುವಕರ ತಂಡವನ್ನು ಅದ್ಭುತವಾಗಿ ರೂಪಿಸಿದ್ದಾರೆ. ಹೀಗಾಗಿಯೇ ಲಂಕಾ ಯಶಸ್ಸು ಕಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಪ ಬೇಡ ಕುಚಿಕು.. ಕುಲದೀಪ್ ಯಾದವ್ ಗೆ ಬೈದಿದ್ದ ಸೂರ್ಯಕುಮಾರ್ ಯಾದವ್ ಈಗ ಮಾಡಿದ್ದೇನು Video