Select Your Language

Notifications

webdunia
webdunia
webdunia
webdunia

T20 WC Final: 2023 ದುರಾದೃಷ್ಟ ಮರುಕಳಿಸುವುದು ಬೇಡವೆಂದು ಟೀಂ ಇಂಡಿಯಾದಿಂದ ಶಾಕಿಂಗ್ ನಿರ್ಧಾರ

Suryakumar Yadav
Photo Credit: BCCI
ಅಹ್ಮದಾಬಾದ್: 2023 ರ ಏಕದಿನ ವಿಶ್ವಕಪ್ ಫೈನಲ್ ದುರಾದೃಷ್ಟ ಮರುಕಳಿಸುವುದು ಬೇಡವೆಂದು ಟೀಂ ಇಂಡಿಯಾ ಕೈಗೊಂಡಿರುವ ನಿರ್ಧಾರ ಶಾಕಿಂಗ್ ಆಗಿದೆ.

2023 ರಲ್ಲಿ ಅಹ್ಮದಾಬಾದ್ ನಲ್ಲಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆದಿತ್ತು. ಆ ಕೂಟದಲ್ಲಿ ಅದುವರೆಗೂ ಗೆಲ್ಲುತ್ತಲೇ ಬಂದಿದ್ದ ಟೀಂ ಇಂಡಿಯಾ ಫೈನಲ್ ನಲ್ಲಿ ಎಡವಿತ್ತು. ಇದಾದ ಬಳಿಕ ಅಹ್ಮದಾಬಾದ್ ಮೈದಾನದಲ್ಲಿ ಮತ್ತೆ ಗೆಲ್ಲಬೇಕು ಎಂಬುದು ಟೀಂ ಇಂಡಿಯಾ ಕನಸಾಗಿದೆ.

ಈ ಹಿಂದೆ ಸೂರ್ಯಕುಮಾರ್ ಯಾದವ್ ಕೂಡಾ ಇದೇ ಮಾತು ಹೇಳಿದ್ದರು. ಅದೇ ಅಹ್ಮದಾಬಾದ್ ಮೈದಾನದಲ್ಲಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಬೇಕು ಎಂಬುದು ನಮ್ಮ ಗುರಿ ಎಂದಿದ್ದರು. ಇದೇ ಛಲ ಹೊತ್ತು ಈ ಬಾರಿ ನ್ಯೂಜಿಲೆಂಡ್ ವಿರುದ್ಧ ಫೈನಲ್ ಪಂದ್ಯವಾಡಲಿದೆ.

ಆದರೆ ಇದಕ್ಕಾಗಿ ಕಳೆದ ಬಾರಿ ಆದಂತೆ ಫಲಿತಾಂಶ ಬರಬಾರದು ಎಂದು ಟೀಂ ಇಂಡಿಯಾ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಇದರ ಅಂಗವಾಗಿ ಈ ಬಾರಿ ಕಳೆದ ಬಾರಿ ತಂಗಿದ್ದ ಹೋಟೆಲ್ ಬಿಟ್ಟು ಬೇರೆ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದೆಯಂತೆ. ಕಳೆದ ಬಾರಿ ಟೀಂ ಇಂಡಿಯಾ ಐಟಿಸಿ ನರ್ಮದಾ ಹೋಟೆಲ್ ನಲ್ಲಿ ತಂಗಿತ್ತು. ಆದರೆ ಈ ಬಾರಿ ದುರಾದೃಷ್ಟವಾಗಬಾರದು ಎಂದು ತಾಜ್ ಸ್ಕೈಲೈನ್ ಗೆ ಶಿಫ್ಟ್ ಆಗಿದೆ. ಕ್ರಿಕೆಟಿಗರೂ ಕೆಲವೊಂದು ನಂಬಿಕೆಗಳನ್ನು ಫಾಲೋ ಮಾಡುತ್ತಾರೆ. ಅದರಂತೆ ಈ ಬಾರಿ ಹೋಟೆಲ್ ಬದಲಾಯಿಸಿ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈವೋಲ್ಟೇಜ್‌ ಪಂದ್ಯಕ್ಕೆ ಅಹಮದಾಬಾದ್‌ ಸಜ್ಜು: ಫೈನಲ್‌ ಹಣಾಹಣಿಗೆ ಅಂಪೈರ್‌, ರೆಫರಿಗಳ ಮಾಹಿತಿ ಇಲ್ಲಿದೆ