Daily Horoscope

Select Your Language

Notifications

webdunia
webdunia
webdunia
webdunia

T20 WC 2026: ಭಾರತ ಪಾಕಿಸ್ತಾನ ಪಂದ್ಯ ನಡೆಯುವ ಸಾಧ್ಯತೆ: ಅದಕ್ಕೆ ಇಲ್ಲಿದೆ ಕಾರಣ

Suryakumar Yadav-Salman Agha
Photo Credit: X
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವೆ ಫೆಬ್ರವರಿ 15 ರಂದು ನಡೆಯಬೇಕಿರುವ ಟಿ20 ವಿಶ್ವಕಪ್ ಲೀಗ್ ಪಂದ್ಯ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಈ ಮೊದಲು ಪಾಕಿಸ್ತಾನ ನಾವು ಭಾರತದ ವಿರುದ್ಧ ಪಂದ್ಯ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಘೋಷಿಸಿತ್ತು. ಬಾಂಗ್ಲಾದೇಶ ಭಾರತಕ್ಕೆ ಬರಲು ನಿರಾಕರಿಸಿದ ಕಾರಣಕ್ಕೆ ಆ ತಂಡವನ್ನು ಟೂರ್ನಿಯಿಂದ ಹೊರಗಿಟ್ಟಿದ್ದನ್ನು ಪ್ರತಿರೋಧಿಸಿ ಪಾಕಿಸ್ತಾನ ತಂಡ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿತ್ತು.

ಪಾಕಿಸ್ತಾನ ಪ್ರಧಾನಿ ಷಹಬಾಜ್ ಷರೀಫ್ ಅವರೇ ಈ ಹೇಳಿಕೆ ನೀಡಿದ್ದರು. ಕೊಲೊಂಬೋದಲ್ಲಿ ನಡೆಯಬೇಕಿರುವ ಈ ಪಂದ್ಯಕ್ಕೆ ಭಾರತವಂತೂ ಈಗಾಗಲೇ ಟಿಕೆಟ್ ಬುಕಿಂಗ್ ಮಾಡಿ ಹೋಗಲು ರೆಡಿಯಾಗಿದೆ. ಇತ್ತ ಪಾಕಿಸ್ತಾನದ ಮನವೊಲಿಸಲು ಐಸಿಸಿ ಮಾತುಕತೆಗೆ ಮುಂದಾಗಿದೆ ಎನ್ನಲಾಗಿದೆ. ಇದಕ್ಕಾಗಿ ಇಬ್ಬರು ಐಸಿಸಿ ಪ್ರತಿನಿಧಿಗಳು ಲಾಹೋರ್ ಗೆ ಬಂದಿದ್ದಾರೆ.

ಇತ್ತ ಶ್ರೀಲಂಕಾ ಕೂಡಾ ನಿರ್ಧಾರ ಬದಲಿಸುವಂತೆ ಪಾಕಿಸ್ತಾನಕ್ಕೆ ಮನವಿ ಮಾಡಿದೆ. ಒಂದು ವೇಳೆ ಪಾಕಿಸ್ತಾನ ಒಪ್ಪದೇ ಹೋದಲ್ಲಿ ಐಸಿಸಿ ದೊಡ್ಡ ಮೊತ್ತದ ದಂಡ ಅಥವಾ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಇದೀಗ ಲಾಹೋರ್ ಗೆ ತೆರಳಿರುವ ಐಸಿಸಿ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿದ ಬಳಿಕ ಪಾಕಿಸ್ತಾನ ಪಂದ್ಯವಾಡಲು ಒಪ್ಪುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯ ಭಾಯಿ ಬ್ಯಾಗ್ ಪ್ಯಾಕ್ ಮಾಡು ಎಂದ್ರು, ನಂಗೆ ನಂಬಕ್ಕೇ ಆಗಲಿಲ್ಲ: ಮೊಹಮ್ಮದ್ ಸಿರಾಜ್