Daily Horoscope

Select Your Language

Notifications

webdunia
webdunia
webdunia
webdunia

T20 WC 2026: ವಾಂಖೆಡೆ ಮೈದಾನದಲ್ಲಿ ರೋಹಿತ್ ಶರ್ಮಾಗೆ ಎಂಥಾ ಸ್ವಾಗತ ಸಿಕ್ತು ನೋಡಿ

Rohit Sharma
ಮುಂಬೈ: ಟಿ20 ವಿಶ್ವಕಪ್ 2026 ರ ರಾಯಭಾರಿಯಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾಗೆ ಮುಂಬೈ ಪ್ರೇಕ್ಷಕರು ಎಂಥಾ ಪ್ರೀತಿ ತೋರಿಸಿದರು ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ.

ಮುಂಬೈ ವಾಂಖೆಡೆ ಮೈದಾನದಲ್ಲಿ ರೋಹಿತ್ ಶರ್ಮಾ ನಿನ್ನೆ ಟ್ರೋಫಿ ಹಿಡಿದುಕೊಂಡು ಬಂದು ಗೌರವ ಸಲ್ಲಿಸಿದ್ದಾರೆ. ಈ ವೇಳೆ ಟೀಂ ಇಂಡಿಯಾ ಕ್ರಿಕೆಟಿಗರು ಅವರತ್ತ ಬಂದು ಮಾತನಾಡಿಸಿದ್ದರು. ಆದರೆ ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಮುಂಬೈ ಪ್ರೇಕ್ಷಕರ ಪ್ರೀತಿ.

ಮುಂಬೈ ರೋಹಿತ್ ಶರ್ಮಾ ತವರು. ಇಲ್ಲಿ ಆಡುವಾಗಲೂ ರೋಹಿತ್ ಶರ್ಮಾಗೆ ದೊಡ್ಡ ಮಟ್ಟದಲ್ಲಿ ಚಿಯರ್ ಮಾಡಲು ಪ್ರೇಕ್ಷಕರು ಬರುತ್ತಾರೆ. ನಿನ್ನೆಯ ಪಂದ್ಯಕ್ಕೆ ಮುನ್ನ ರೋಹಿತ್ ಮೈದಾನಕ್ಕೆ ಬಂದಾಗ ಪ್ರೇಕ್ಷಕರು ಜೋರಾಗಿ ರೋಹಿತ್... ರೋಹಿತ್ ಎಂದು ಚಿಯರ್ ಮಾಡಿದ್ದಲ್ಲದೆ ಮುಂಬೈ ಕಾ ರಾಜಾ ಎಂದು ಚೀರಿಕೊಂಡು ತಮ್ಮ ಪ್ರೀತಿ ತೋರಿಸಿದ್ದಾರೆ.

ಇನ್ನು ತಮ್ಮನ್ನು ಚಿಯರ್ ಮಾಡುತ್ತಿದ್ದ ಪ್ರೇಕ್ಷಕರತ್ತ ರೋಹಿತ್ ಕೂಡಾ ಕೈ ಬೀಸಿ ಪ್ರತಿಕ್ರಿಯಿಸಿದ್ದಾರೆ. ಬಳಿಕ ಅಲ್ಲಿದ್ದ ಕ್ರಿಕೆಟಿಗರನ್ನು ಮಾತನಾಡಿ ರೋಹಿತ್ ಮೈದಾನದಿಂದ ನಿರ್ಗಮಿಸಿದ್ದಾರೆ.

pic.twitter.com/c10nWxhNq6

 

— Rohan???? (@rohann__45) February 7, 2026

Share this Story:

Follow Webdunia kannada

ಮುಂದಿನ ಸುದ್ದಿ

ICC T20 WC: ಸೂರ್ಯ ಅಬ್ಬರ, ಸಿರಾಜ್‌ ಬಿರುಗಾಳಿ: ಅಮೆರಿಕಾವನ್ನು ಮಣಿಸಿ ಭಾರತ ಶುಭಾರಂಭ