Publish Date: Sat, 09 Nov 2024 (11:14 IST)
Updated Date: Sat, 09 Nov 2024 (11:19 IST)
ಡರ್ಬನ್: ಸಂಜು ಸ್ಯಾಮ್ಸನ್ ಗೆ ಟೀಂ ಇಂಡಿಯಾ ಟಿ20 ಫಾರ್ಮ್ಯಾಟ್ ನಲ್ಲಿ ಅವಕಾಶ ನೀಡಲು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅವರೇ ಕಾರಣ. ಈಗ ಸಂಜು ಸ್ಯಾಮ್ಸನ್ ಗಾಗಿ ಮೈದಾನದಲ್ಲೂ ಎದುರಾಳಿ ಆಟಗಾರರೊಂದಿಗೆ ಕಿತ್ತಾಟವಾಡಿದ ಪ್ರಸಂಗ ನಡೆದಿದೆ.
ನಾಯಕನಾಗಿ ಸೂರ್ಯಕುಮಾರ್ ಯಾದವ್ ಕೂಲ್ ಆಗಿಯೇ ಇದುವರೆಗೆ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಮಾತ್ರ ಎದುರಾಳಿ ಆಟಗಾರ ಜೇನ್ ಸನ್ ಜೊತೆ ವಾಗ್ವಾದಕ್ಕಿಳಿದರು. ಅದೂ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಸಂಜು ಸ್ಯಾಮ್ಸನ್ ಪರವಾಗಿ.
ದ ಆಫ್ರಿಕಾ ಇನಿಂಗ್ಸ್ ನ 15.3 ನೇ ಓವರ್ ನಲ್ಲಿ ಘಟನೆ ನಡೆದಿದೆ. ಬ್ಯಾಟಿಂಗ್ ಮಾಡುತ್ತಿದ್ದ ಜೇನ್ ಸನ್ ಭಾರತದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ವರ್ತನೆ ಬಗ್ಗೆ ತಗಾದೆ ತೆಗೆದಿದ್ದಾರೆ. ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಸಂಜು ಪದೇ ಪದೇ ಪಿಚ್ ಗೆ ಬಂದು ಬಾಲ್ ಕಲೆಕ್ಟ್ ಮಾಡುತ್ತಿದ್ದರು ಎಂಬುದು ಅವರ ಆಕ್ಷೇಪವಾಗಿತ್ತು.
ಆದರೆ ಜೇನ್ ಸನ್ ತಡೆ ಮಾಡುತ್ತಿದ್ದುದರಿಂದಲೇ ಸಂಜು ಅನಿವಾರ್ಯವಾಗಿ ಪಿಚ್ ನಲ್ಲಿ ಕಾಲು ಇಡುತ್ತಿದ್ದರು ಎಂದು ಭಾರತೀಯ ಆಟಗಾರರ ವಾದವಾಗಿತ್ತು. ಸಂಜು ವರ್ತನೆ ಪ್ರಶ್ನೆ ಮಾಡಿದ್ದಕ್ಕೆ ಸೂರ್ಯಕುಮಾರ್ ಯಾದವ್ ಎದುರಾಳಿ ಬ್ಯಾಟಿಗರ ಜೊತೆ ವಾಗ್ವಾದವನ್ನೇ ನಡೆಸಿದರು. ಬಳಿಕ ಅಂಪಾಯರ್ ಮಧ್ಯಪ್ರವೇಶಿಸಿದರು. ಈ ವೇಳೆ ಸೂರ್ಯ ಅಂಪಾಯರ್ ಗೂ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಟ್ಟರು.