Select Your Language

Notifications

webdunia
webdunia
webdunia
webdunia

ಮೈದಾನದಲ್ಲಿ ಅಬ್ಬರದ ಶತಕ, ಹೊರಗೆ ಬಂದ ಮೇಲೆ ಸಂಜು ಸ್ಯಾಮ್ಸನ್ ಫುಲ್ ಭಾವುಕ

Sanju Samson

Krishnaveni K

ಡರ್ಬನ್ , ಶನಿವಾರ, 9 ನವೆಂಬರ್ 2024 (10:11 IST)
Photo Credit: X
ಡರ್ಬನ್: ದ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು  ಸ್ಯಾಮ್ಸನ್ ಬಳಿಕ ಭಾವುಕರಾಗಿ ಮಾತನಾಡಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ 50 ಎಸೆತಗಳಲ್ಲಿ 10 ಸಿಕ್ಸರ್ ಗಳೊಂದಿಗೆ 107 ರನ್ ಚಚ್ಚಿದ್ದರು. ಅವರ ಅಬ್ಬರದ ಬ್ಯಾಟಿಂಗ್ ಗೆ ಕ್ರಿಕೆಟ್ ಲೋಕವೇ ದಂಗಾಗಿತ್ತು. ವಿಶೇಷವೆಂದರೆ ಇದಕ್ಕೆ ಮೊದಲು ಸಂಜು ಕೊನೆಯದಾಗಿ ಆಡಿದ್ದ ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದಲ್ಲೂ ಅಬ್ಬರದ ಶತಕ ಸಿಡಿಸಿದ್ದರು. ಆ ಮೂಲಕ ಸತತ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ.

ಬ್ಯಾಟಿಂಗ್ ನಲ್ಲಿ ಆಕ್ರಮಣಕಾರಿಯಾಗಿ ಎದುರಾಳಿಗಳನ್ನು ಮನಸೋ ಇಚ್ಛೆ ದಂಡಿಸುವ ಸಂಜು ಸ್ಯಾಮ್ಸನ್ ಬಳಿಕ ಭಾವುಕರಾಗಿದ್ದಾರೆ. ಪಂದ್ಯದ ಬಳಿಕ ತಮ್ಮ ಅಬ್ಬರದ ಇನಿಂಗ್ಸ್ ಬಗ್ಗೆ ಮಾತನಾಡುವ ಅವರು ಭಾವುಕರಾಗಿದ್ದಾರೆ. ನಿಮ್ಮ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿ ನೀವಿದ್ದೀರಿ ಅನಿಸುತ್ತಿದೆಯೇ ಎಂದು ಕೇಳಿದಾಗ ಅವರು ಭಾವುಕರಾದರು.

‘ಇಂತಹದ್ದೊಂದು ಕ್ಷಣಕ್ಕಾಗಿ 10 ವರ್ಷ ಕಾದಿದ್ದೆ. ಬಹುಶಃ ನಾನು ಇದರ ಬಗ್ಗೆ ಮಾತನಾಡಿದರೆ ಕೊಂಚ ಭಾವುಕನಾಗುತ್ತೇನೆ. ಹಾಗೆ ಆಗಲು ನಾನು ಈಗ ಇಷ್ಟಪಡಲ್ಲ. ನನ್ನ ಈ ಯಶಸ್ಸಿನ ಬಗ್ಗೆ ನಾನು ಕೃತಜ್ಞನಾಗಿದ್ದೇನೆ. ಆದರೆ ಏನೇ ಮಾಡಿದರೂ ವಿಧೇಯನಾಗಿ ನನ್ನ ಎದುರು ಏನು ಬರುತ್ತದೋ ಅದನ್ನು ಸ್ವಿಕರಿಸುತ್ತಾ ಸಾಗಲು ಇಷ್ಟಪಡುತ್ತೇನೆ’ ಎಂದು ಸಂಜು ಭಾವುಕರಾಗಿ ಹೇಳಿದ್ದಾರೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಟಿ20 ಕ್ರಿಕೆಟ್ ನಿಂದ ನಿವೃತ್ತರಾದ ಮೇಲೆ ಸಂಜುಗೆ ಟಿ20 ಕ್ರಿಕೆಟ್ ನಲ್ಲಿ ಖಾಯಂ ಸ್ಥಾನ ಸಿಕ್ಕಿದೆ. ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಳಸಿಕೊಂಡಿದ್ದಾರೆ. ಒಂದು ವೇಳೆ ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್ ತಂಡಕ್ಕೆ ವಾಪಸ್ ಆದರೆ ಬಹುಶಃ ಅವರು ಆರಂಭಿಕ ಸ್ಥಾನವನ್ನು ಬಿಟ್ಟುಕೊಡಬೇಕಾದೀತು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಅಭಿಮಾನಿಯ ವರ್ತನೆಯಿಂದ ಗಲಿಬಿಲಿಯಾದ ವಿರಾಟ್ ಕೊಹ್ಲಿ: ವಿಡಿಯೋ ವೈರಲ್