ದುಬೈ: ಏಷ್ಯಾ ಕಪ್ ಗೆದ್ದ ಬಳಿಕ ಪ್ರಧಾನಿ ಮೋದಿ ಮಾಡಿದ ಟ್ವೀಟ್ ಗೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯಿಸಿದ್ದು ದೇಶದ ಪ್ರಧಾನಿಯೇ ಈ ಹೇಳಿಕೆ ನೀಡುವಾಗ ಖುಷಿಯಾಗುತ್ತಿದೆ ಎಂದಿದ್ದಾರೆ.
ನಿನ್ನೆ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ವಿಕೆಟ್ ಗಳಿಂದ ಸೋಲಿಸಿದ ಟೀಂ ಇಂಡಿಯಾ 9 ನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿದೆ. ಈ ಗೆಲುವಿನ ಬಳಿಕ ಪ್ರಧಾನಿ ಮೋದಿ ಟ್ವೀಟ್ ಮಾಡಿ ಟೀಂ ಇಂಡಿಯಾಕ್ಕೆ ಅಭಿನಂದಿಸಿದ್ದಾರೆ.
ಮೈದಾನದಲ್ಲೂ ಆಪರೇಷನ್ ಸಿಂಧೂರ್ ಆಗಿದೆ. ಗೆಲುವು ಇಲ್ಲೂ ನಮ್ಮದೇ ಎಂದು ಟ್ವೀಟ್ ಮಾಡಿ ಅಭಿನಂದಿಸಿದ್ದರು. ಪ್ರಧಾನಿ ಮೋದಿ ಟ್ವೀಟ್ ಪಾಕಿಸ್ತಾನಿಯರ ಹೊಟ್ಟೆ ಉರಿಗೆ ಕಾರಣವಾಗಿದೆ. ಇತ್ತ ಟೀಂ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಖುಷಿಪಟ್ಟಿದ್ದಾರೆ.
ದೇಶದ ಪ್ರಧಾನಿಯೇ ಫ್ರಂಟ್ ಫೂಟ್ ನಲ್ಲಿ ಬ್ಯಾಟ್ ಮಾಡುವಾಗ ಖುಷಿಯಾಗುತ್ತದೆ. ಅವರೇ ಬ್ಯಾಟ್ ಮಾಡಿ ರನ್ ಗಳಿಸಿದಂತೆ ಅನಿಸುತ್ತಿದೆ. ಸರ್ ನಮ್ಮ ಮುಂದೆ ನಿಂತಾಗ ನಾವು ಫ್ರೀ ಆಡಲು ಸುಲಭವಾಗುತ್ತದೆ ಎಂದಿದ್ದಾರೆ.