Select Your Language

Notifications

webdunia
webdunia
webdunia
webdunia

ಕಾರಿನ ಬಳಿ ಬಂದು ಸಹಾಯ ಬೇಡಿದ ಗೋರಕ್ಷಕನಿಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಮಾಡಿದ್ದೇನು Video

Suryakumar Yadav
ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರು "ಹರ್ ಹರ್ ಮಹಾದೇವ್" ಎಂದು ಜಪಿಸುತ್ತಾ, ಗೋಮಾತೆಯ ರಕ್ಷಣೆಗಾಗಿ ಮತ್ತು ಗೋಸೇವಕರ ಸತ್ಕಾರ್ಯಕ್ಕೆ ತಮ್ಮ ಬೆಂಬಲ ಸೂಚಿಸುವ ಮೂಲಕ ಧನಸಹಾಯ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಈ ದಿಗಂತ ತಾರೆ, ಮೈದಾನದ ಹೊರಗೂ ತಮ್ಮ ಉದಾರತೆ ಮತ್ತು ಸಾಂಸ್ಕೃತಿಕ ಮೌಲ್ಯಗಳಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಸೂರ್ಯಕುಮಾರ್ ಯಾದವ್ ಕಾರಿನಲ್ಲಿ ಕುಳಿತಿದ್ದಾಗ ಓರ್ವ ಗೋ ರಕ್ಷಕ ಅವರ ಬಳಿ ಬಂದಿದ್ದಾನೆ. ಈ ವೇಳೆ ಆತನ ಕೈಗೆ ಒಂದಿಷ್ಟು ನೋಟುಗಳನ್ನು ನೀಡಿದ ಸೂರ್ಯ ನಮಸ್ಕರಿಸಿದ್ದಾರೆ. ಈ ವೇಳೆ ಗೋ ರಕ್ಷಕ ಸೆಲ್ಫೀ ಕೇಳಿದ್ದು ಇದಕ್ಕೂ ತಾಳ್ಮೆಯಿಂದ ಪೋಸ್ ಕೊಟ್ಟಿದ್ದಾರೆ.

ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಭಕ್ತರೊಬ್ಬರಿಗೆ ನೆರವು ನೀಡಿದ ಸೂರ್ಯಕುಮಾರ್, ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಇರುವ ಪವಿತ್ರ ಸ್ಥಾನವನ್ನು ಸ್ಮರಿಸಿದಂತಾಗಿದೆ. ಗೋಸಂರಕ್ಷಣೆ ಪ್ರತಿಯೊಬ್ಬರ ಧರ್ಮ ಹಾಗೂ ಕರ್ತವ್ಯ ಎಂಬುದನ್ನು ಎತ್ತಿಹಿಡಿದ ಅವರು, ಭಕ್ತಿಯ ಸಂಕೇತವಾಗಿ "ಹರ್ ಹರ್ ಮಹಾದೇವ್" ಎಂದು ಉದ್ಘೋಷಿಸಿದರು.

ಸೂರ್ಯಕುಮಾರ್ ಯಾದವ್ ಅವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಮೈದಾನದಲ್ಲಿ ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆ ಗೈಯುವ ಈ ಸ್ಫೋಟಕ ಬ್ಯಾಟರ್, ನೈಜ ಜೀವನದಲ್ಲೂ ತಮ್ಮ ಧಾರ್ಮಿಕ ನಿಷ್ಠೆ ಮತ್ತು ಮಾನವೀಯತೆಯಿಂದ ಕೋಟ್ಯಂತರ ಜನರ ಗೌರವಕ್ಕೆ ಪಾತ್ರರಾಗಿದ್ದಾರೆ.


pic.twitter.com/CnXV6UtA8G

 

— ????????????????????????????⁴⁵ (@rushiii_12) August 31, 2026

Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋ ರೈಲಿನಲ್ಲಿ ಸಾಮಾನ್ಯರಂತೆ ಮೂಲೆಯಲ್ಲಿ ನಿಂತಿದ್ದ ಜಾವಗಲ್ ಶ್ರೀನಾಥ್ ನೋಡಿ ಪಬ್ಲಿಕ್ ಶಾಕ್