Publish Date: Sat, 29 Aug 2026 (15:16 IST)
Updated Date: Sat, 29 Aug 2026 (15:18 IST)
ಮುಂಬೈ: ಭಾರತ ಟಿ20 ಕ್ರಿಕೆಟ್ ತಂಡದ ನಾಯಕತ್ವದಿಂದ ಮತ್ತು ತಂಡದಿಂದಲೇ ದಿಢೀರ್ ಕೊಕ್ ಪಡೆದಿದ್ದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಕೊನೆಗೂ ತಮ್ಮ ಮೌನ ಮುರಿದು ಮನಬಿಚ್ಚಿ ಮಾತನಾಡಿದ್ದಾರೆ.
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರ ಜೊತೆಗಿನ ಸಂದರ್ಶನದಲ್ಲಿ ಹಾಗೂ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಅವರು ತಮ್ಮ ಮನಸ್ಸಿನ ನೋವು ಹಾಗೂ ಆಘಾತವನ್ನು ಹಂಚಿಕೊಂಡಿದ್ದಾರೆ.
2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಹೆಮ್ಮೆಯಿತ್ತು. 2028ರ ಟಿ20 ವಿಶ್ವಕಪ್ ಹಾಗೂ ಲಾಸ್ ಏಂಜಲೀಸ್ ಒಲಿಂಪಿಕ್ಸ್ ವರೆಗೆ ತಂಡವನ್ನು ಮುನ್ನಡೆಸುವ ಆತ್ಮವಿಶ್ವಾಸವಿತ್ತು. ಆದರೆ ಬಿಸಿಸಿಐ ತಂಡ ಪ್ರಕಟಿಸಿದಾಗ ನಾಯಕತ್ವ ಮಾತ್ರವಲ್ಲ, ತಂಡದಲ್ಲೇ ನನ್ನ ಹೆಸರಿಲ್ಲದಿರುವುದು ಆಘಾತ ತಂದಿತ್ತು ಎಂದು ಸೂರ್ಯಕುಮಾರ್ ತಿಳಿಸಿದ್ದಾರೆ.
ಮ್ಮ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ಮಾದರಿಯಲ್ಲಿ ಒಂದೇ ಒಂದು ಸರಣಿಯನ್ನೂ ಸೋತಿರಲಿಲ್ಲ. ಎಲ್ಲವೂ ಉತ್ತಮವಾಗಿ ಸಾಗುತ್ತಿರುವಾಗ ಈ ದಿಢೀರ್ ಬದಲಾವಣೆ ಯಾಕೆ ಎಂದು ಹಲವು ಬಾರಿ ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದಾರೆ.
ತಂಡದಿಂದ ಹೊರಬಿದ್ದ ಬಳಿಕ ಸುಮಾರು ಒಂದು ತಿಂಗಳು ಮನೆಯಲ್ಲೇ ಉಳಿದು, ಯಾಕೆ ಹೀಗಾಯಿತು? ಎಂದು ಪತ್ನಿ ಮತ್ತು ಮಗಳೊಂದಿಗೆ ಚರ್ಚಿಸಿ ನೊಂದಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದಿರುವುದೂ ಇದಕ್ಕೆ ಕಾರಣವಾಗಿರಬಹುದು ಎಂದಿದ್ದಾರೆ.
ಶ್ರೇಯಸ್ ಅಯ್ಯರ್ ಉತ್ತಮ ಆಟಗಾರ ಹಾಗೂ ಒಳ್ಳೆಯ ನಾಯಕ. ಅವರ ನಾಯಕತ್ವದಲ್ಲಿ ತಂಡ ಬೆಳೆಯಲಿ ಎಂದು ಹಾರೈಸುವುದಾಗಿ ತಿಳಿಸಿರುವ ಸೂರ್ಯ, ಆಯ್ಕೆಗಾರರ ನಿರ್ಧಾರವನ್ನು ಗೌರವಿಸುವುದಾಗಿ ಹೇಳಿದ್ದಾರೆ.
ತಮ್ಮ ಕೆರಿಯರ್ ಮುಗಿದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ರಾಷ್ಟ್ರೀಯ ತಂಡಕ್ಕೆ ಮರಳಲು ಕಠಿಣ ಪರಿಶ್ರಮ ಮುಂದುವರಿಸುವುದಾಗಿ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಶ್ರಮಿಸಿ ಮತ್ತೊಮ್ಮೆ ಕಂಬ್ಯಾಕ್ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ