Publish Date: Thu, 26 Jun 2025 (14:43 IST)
Updated Date: Thu, 26 Jun 2025 (14:45 IST)
ಐಪಿಎಲ್ 2025ರ ಆವೃತ್ತಿಯ ಶ್ರೇಷ್ಠ ಆಡಗಾರನಾಗಿ ಹೊರಹೊಮ್ಮಿದ ಸೂರ್ಯಕುಮಾರ್ ಯಾದವ್ ಅವರು ಇದೀಗ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ತಮ್ಮ ಆರೋಗ್ಯ ಸಂಬಂಧ ಸೂರ್ಯಕುಮಾರ್ ಯಾದವ್ ಅವರು ಬಿಗ್ ಅಪ್ಡೇಟ್ ಅನ್ನು ನೀಡಿದ್ದಾರೆ.
ಸ್ಟಾರ್ ಬ್ಯಾಟರ್ ಹರ್ನಿಯಾಕ್ಕೆ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಗೆ ಪ್ರಯಾಣ ಬೆಳೆಸಿದ್ದರು. ಇದೀಗ ತಮ್ಮ ಆರೋಗ್ಯ ಸಂಬಂಧ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಅವರು ತಮ್ಮ ಹೊಟ್ಟೆಯ ಕೆಳಗಿನ ಬಲಭಾಗದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಆಸ್ಪತ್ರೆಯ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಂಡು ಬರೆದುಕೊಂಡಿದ್ದಾರೆ.
ಕೆಳಗಿನ ಬಲ ಹೊಟ್ಟೆಯಲ್ಲಿ ಕ್ರೀಡಾ ಅಂಡವಾಯು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಮೃದುವಾದ ಶಸ್ತ್ರಚಿಕಿತ್ಸೆಯ ನಂತರ, ನಾನು ಈಗಾಗಲೇ ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ಹಂಚಿಕೊಳ್ಳಲು ಕೃತಜ್ಞರಾಗಿರುತ್ತೇನೆ. ಹಿಂತಿರುಗಲು ಕಾಯಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.'