ಟಿ20 ಸರಣಿ ಮುಗಿದ ಬಳಿಕ ಬಸ್ ನಲ್ಲೇ ಜಗಳ ಮಾಡಿಕೊಂಡ ಸೂರ್ಯಕುಮಾರ್-ಅರ್ಷ್ ದೀಪ್ ಸಿಂಗ್

Webdunia
ಶನಿವಾರ, 16 ಡಿಸೆಂಬರ್ 2023 (13:47 IST)
ಜೊಹಾನ್ಸ್ ಬರ್ಗ್: ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿ ಮುಗಿದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಅರ್ಷ್ ದೀಪ್ ಸಿಂಗ್ ನಡುವೆ ಜಗಳವಾಗಿತ್ತು ಎನ್ನಲಾಗಿದೆ.

ಕೊನೆಯ ಟಿ20 ಪಂದ್ಯ ಮುಗಿದ ಬಳಿಕ ಭಾರತ ತಂಡ ಬಸ್ ನಲ್ಲಿ ಹೋಟೆಲ್ ಗೆ ತೆರಳುವಾಗ ಸೂರ್ಯಕುಮಾರ್ ಯಾದವ್ ಸಹ ಆಟಗಾರ ಅರ್ಷ್‍ ದೀಪ್ ಸಿಂಗ್ ಗೆ ಬೈದಾಡಿಕೊಳ್ಳುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಸ್ ಹತ್ತುತ್ತಿದ್ದ ಸೂರ್ಯಕುಮಾರ್ ಯಾದವ್ ಆಗಲೇ ಸೀಟ್ ನಲ್ಲಿ ಕೂತಿದ್ದ ಅರ್ಷ್ ದೀಪ್ ಸಿಂಗ್ ರನ್ನು ನೋಡಿ ಕೈ ತೋರಿಸಿ ಆಕ್ರೋಶ ಹೊರಹಾಕುತ್ತಾರೆ. ಇದಕ್ಕೆ ಅರ್ಷ್ ದೀಪ್ ಕೂಡಾ ಉತ್ತರ ನೀಡುತ್ತಾರೆ. ಬಳಿಕ ಸೂರ್ಯ ಮುಖ ಸಿಂಡರಿಸಿಕೊಂಡೇ ಅರ್ಷ್ ದೀಪ್ ಕುಳಿತಿದ್ದ ಹಿಂದಿನ ಸೀಟ್ ನಲ್ಲಿ ಸೂರ್ಯ ಕೂರುತ್ತಾರೆ.

ಇವರಿಬ್ಬರ ಈ ವಿಡಿಯೋ ನೋಡಿ ಯಾವುದೇ ವಿಚಾರಕ್ಕೆ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಯಾವ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND VS ENG T20: ಟಾಸ್‌ ಗೆದ್ದ ಭಾರತ ಬೌಲಿಂಗ್ ಆಯ್ಕೆ, Video

ಟೀಂ ಇಂಡಿಯಾ ಕೋಚ್ ಆಗಿ ಗೌತಮ್ ಗಂಭೀರ್ ಅವಧಿ ಮುಕ್ತಾಯವಾಗುವುದು ಯಾವಾಗ

ಸಚಿನ್ ತೆಂಡುಲ್ಕರ್ ದಂಪತಿ ಪಕ್ಕವೇ ಕೂತು ವಿಂಬಲ್ಡನ್ ಪಂದ್ಯ ವೀಕ್ಷಿಸಿದ ಶುಭಮನ್ ಗಿಲ್: ನೆಟ್ಟಿಗರಿಂದ ಕಾಮೆಂಟೋ ಕಾಮೆಂಟ್ Video

IND vs ENG: ಐಪಿಎಲ್ ನಲ್ಲಿ ಮಾತ್ರ ಹುಲಿ.. ಇಂಗ್ಲೆಂಡ್ ವಿರುದ್ಧ ಸೋತ ಬಳಿಕ ಗಂಭೀರ್, ಕ್ಯಾಪ್ಟನ್ ಶ್ರೇಯಸ್ ಚರ್ಚೆ ಜೋರು Video

IND vs ENG: ಹೇಗಿದ್ದ ಟೀಂ ಇಂಡಿಯಾ ಗತಿ ಹೇಗಾಗೋಯ್ತಲ್ಲಾ.. ಟೀಂ ಇಂಡಿಯಾ ಈ ಪರಿ ಸೋಲುವುದಕ್ಕೆ ಕಾರಣ ಯಾರು

ಮುಂದಿನ ಸುದ್ದಿ
Show comments