ದಿ ಓವಲ್: ಡಬ್ಲ್ಯುಟಿಸಿ ಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾ ಆಟಗಾರರ ಮೇಲೆ ಮಾಜಿ ಕ್ರಿಕೆಟಿಗರಿಗೂ ಸಿಟ್ಟಿಗೆದ್ದಿದ್ದಾರೆ.
ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ನೇರವಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರೆಹಾನೆ ಮೇಲೆ ಆಕ್ರೋಶ ಹೊರಹಾಕಿದ್ದಾರೆ.
ವಿರಾಟ್, ರೋಹಿತ್, ರೆಹಾನೆ ವೈಯಕ್ತಿಕ ದಾಖಲೆಗಾಗಿ ಆಡುತ್ತಿದ್ದಾರೆ. ನಾನು ಗಮನಿಸಿದ ಹಾಗೆ ಭಾರತೀಯ ಆಟಗಾರರು ದಾಖಲೆಯ ಸನಿಹವಿದ್ದಾಗ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಔಟ್ ಆಗುತ್ತಿದ್ದಾರೆ. ಅರ್ಧಶತಕ ಹೊಡೆಯುವುದು ಮುಖ್ಯವಾಗಿರಬಹುದು ಆದರೆ ಅದಕ್ಕಾಗಿ ನಿಮ್ಮ ವಿಕೆಟ್ ಕಳೆದುಕೊಳ್ಳುವುದಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ದ್ವಿತೀಯ ಇನಿಂಗ್ಸ್ ನಲ್ಲಿ ಈ ಮೂವರೂ ಬ್ಯಾಟಿಗರು ಅರ್ಧಶತಕದ ಸಮೀಪವಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ‍್ ಆಗಿದ್ದರು.
ಇನ್ನು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕೂಡಾ ಇದೇ ಕಾರಣಕ್ಕೆ ರೋಹಿತ್ ಶರ್ಮಾರನ್ನು ಟೀಕಿಸಿದ್ದಾರೆ. ರೋಹಿತ್ ಫೂಟ್ ವರ್ಕ್ ತಪ್ಪಾಗಿರಲಿಲ್ಲ. ಆದರೆ ಸ್ಪಿನ್ನರ್ ಗಳು ಬಂದಾಗ ರನ್ ಗಳಿಸಲು ಆತುರ ಮಾಡಿ ವಿಕೆಟ್ ಒಪ್ಪಿಸಿದರು ಎಂದು ಆಕ್ರೋಶ ಹೊರಹಾಕಿದ್ದಾರೆ.