Webdunia - Bharat's app for daily news and videos

Install App

ನೀನು ನನ್ನ ಮಗನಲ್ಲ ಎಂದು ಕೆಎಲ್ ರಾಹುಲ್ ಗೆ ವಾರ್ನ್ ಮಾಡಿದ ಸುನಿಲ್ ಶೆಟ್ಟಿ

Krishnaveni K
ಬುಧವಾರ, 20 ಮಾರ್ಚ್ 2024 (15:00 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮಗಳು ಎಂದು ಎಲ್ಲರಿಗೂ ಗೊತ್ತು. ಇದೀಗ ಕೆಎಲ್ ರಾಹುಲ್ ಗೆ ಮಾವ ಸುನಿಲ್ ಶೆಟ್ಟಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಕೆಎಲ್ ರಾಹುಲ್ ಅಳಿಯನಾದರೂ ಸುನಿಲ್ ಶೆಟ್ಟಿ ಜೊತೆಗೆ ತಂದೆ-ಮಗನಷ್ಟೇ ಉತ್ತಮ ಬಾಂಧವ್ಯವಿದೆ. ಸುನಿಲ್ ಶೆಟ್ಟಿ ಕೂಡಾ ರಾಹುಲ್ ನನ್ನ ಇನ್ನೊಬ್ಬ ಮಗ ಎಂದೇ ಹೇಳುತ್ತಾರೆ. ಆದರೆ ಇದೀಗ ಸುನಿಲ್ ಶೆಟ್ಟಿ ತಮ್ಮ ವರಸೆ ಬದಲಿಸಿದ್ದು, ಸದ್ಯಕ್ಕೆ ನೀನು ನನ್ನ ಮಗನಲ್ಲ ಎಂದು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.

ಅಷ್ಟಕ್ಕೂ ಈ ರೀತಿ ಎಚ್ಚರಿಕೆ ಕೊಟ್ಟಿದ್ದು ಗಂಭೀರವಾಗಿ ಅಲ್ಲ! ಜಾಹೀರಾತೊಂದಕ್ಕಾಗಿ. ಐಪಿಎಲ್ ನಲ್ಲಿ ಸುನಿಲ್ ಶೆಟ್ಟಿ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುತ್ತಿದ್ದಾರೆ. ಆದರೆ ಅಳಿಯ ರಾಹುಲ್ ಲಕ್ನೋ ತಂಡದ ನಾಯಕ. ಹೀಗಾಗಿ ಮುಂಬೈ ಆಟಗಾರ ರೋಹಿತ್ ಶರ್ಮಾ ಸೇರಿದಂತೆ ತಮಾಷೆಯ ಜಾಹೀರಾತೊಂದನ್ನು ಹೊರತರಲಾಗಿದೆ.

ಈ ಜಾಹೀರಾತಿನಲ್ಲಿ ರೆಸ್ಟೋರೆಂಟ್ ನಲ್ಲಿ ಸುನಿಲ್ ಶೆಟ್ಟಿ ಮತ್ತು ರೋಹಿತ್ ಜೊತೆಯಾಗಿ ಕುಳಿತಿರುವಾಗ ಲಕ್ನೋ ಜೆರ್ಸಿಯಲ್ಲಿ ಬರುವ ರಾಹುಲ್ ‘ಪಪ್ಪಾ’ ಎನ್ನುತ್ತಾರೆ. ಆಗ ಸುನಿಲ್ ಈ ಐಪಿಎಲ್ ಮುಗಿಯುವರೆಗೂ ನೀನು ನನ್ನ ಮಗನಲ್ಲ. ನನಗೆ ಶರ್ಮಾಜೀಯೇ ಮಗ’ ಎಂದು ರೋಹಿತ್ ರನ್ನು ತೋರಿಸುತ್ತಾರೆ. ಅಗ ರಾಹುಲ್ ಸಪ್ಪೆ ಮುಖ ಹಾಕಿಕೊಂಡು ಜಾಗ ಖಾಲಿ ಮಾಡುತ್ತಾರೆ. ಈ ವಿಡಿಯೋ ಈಗ ನೆಟ್ಟಿಗರಿಗೆ ಭಾರೀ ಇಷ್ಟವಾಗಿದೆ.

 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ದ ಆಫ್ರಿಕಾಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

Gautam Gambhir: ಗೌತಮ್ ಗಂಭೀರ್ ತಾಯಿಗೆ ಗಂಭೀರ: ಭಾರತಕ್ಕೆ ಮರಳಿದ ಟೀಂ ಇಂಡಿಯಾ ಕೋಚ್

Shubman Gill: ಸಚಿನ್, ಕೊಹ್ಲಿಗೇ ಇಲ್ಲದ ಅಹಂ ಶುಬ್ಮನ್ ಗಿಲ್ ತಲೆಗೆ ಹತ್ತಿದ್ಯಾ: ನೆಟ್ಟಿಗರ ಆಕ್ರೋಶ

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

ಮುಂದಿನ ಸುದ್ದಿ
Show comments