Select Your Language

Notifications

webdunia
webdunia
webdunia
webdunia

ಶ್ರೀಲಂಕಾ ಕ್ರಿಕೆಟ್ ಪೆವಿಲಿಯನ್ ನಲ್ಲಿ ತಳಮಳ

ಶ್ರೀಲಂಕಾ ಕ್ರಿಕೆಟ್ ಪೆವಿಲಿಯನ್ ನಲ್ಲಿ ತಳಮಳ
ದೆಹಲಿ , ಮಂಗಳವಾರ, 5 ಡಿಸೆಂಬರ್ 2017 (16:40 IST)
ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಮುಗಿದಿದ್ದು ಶ್ರೀಲಂಕಾ ತಂಡ ಸೋಲಿನ ಹಾದಿಯಲ್ಲಿದೆ.
 

ದಿನದಂತ್ಯಕ್ಕೆ ಭಾರತ ನೀಡಿದ 410 ರನ್ ಗಳ ಗುರಿ ಬೆನ್ನತ್ತಿದ ಲಂಕಾ 3 ವಿಕೆಟ್ ಕಳೆದುಕೊಂಡು 31 ರನ್ ಗಳಿಸಿ ಸಂಕಷ್ಟದಲ್ಲಿದೆ. ಇದಕ್ಕೂ ಮೊದಲು ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಗುರಿ ಬೆನ್ನತ್ತಿದ ಲಂಕಾಗೆ ಆರಂಭದಲ್ಲಿಯೇ ಮೊಹಮ್ಮದ್ ಶಮಿ ಆಘಾತ ನೀಡಿದರು. ಇದಾದ ಬಳಿಕ ಜಡೇಜಾ ಬೆನ್ನು ಬೆನ್ನಿಗೆ 2 ವಿಕೆಟ್ ಕಿತ್ತು ಮತ್ತಷ್ಟು ಹೊಡೆತ ನೀಡಿದರು. ಲಂಕಾ ಗೆಲುವಿಗೆ ಇನ್ನೂ 379 ರನ್ ಗಳ ಅಗತ್ಯವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರನ್ ಗಳಿಸುವ ಧಾವಂತದಲ್ಲಿ ಎಡವಿ ಬಿದ್ದ ಟೀಂ ಇಂಡಿಯಾ