Publish Date: Tue, 05 Dec 2017 (10:05 IST)
Updated Date: Tue, 05 Dec 2017 (10:07 IST)
ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಶ್ರೀಲಂಕಾ ಪ್ರಥಮ ಇನಿಂಗ್ಸ್ ನಲ್ಲಿ 373 ರನ್ ಗಳಿಗೆ ಆಲೌಟ್ ಆಗಿದೆ.
ಶತಕ ಗಳಿಸಿ ಅಜೇಯರಾಗುಳಿದಿದ್ದ ನಾಯಕ ಚಂಡಿಮಾಲ್ ಇಂದು 164 ರನ್ ಗಳಿಸಿ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಭಾರತ ಮೊದಲ ಇನಿಂಗ್ಸ್ ನಲ್ಲಿ 536 ರನ್ ಮಾಡಿತ್ತು. ಇದರೊಂದಿಗೆ ಇದೀಗ ಟೀಂ ಇಂಡಿಯಾಗೆ 163 ರನ್ ಗಳ ಮಹತ್ವದ ಮುನ್ನಡೆ ಲಭಿಸಿದೆ.
ಇಂದು ವೇಗವಾಗಿ ರನ್ ಗಳಿಸಿ ಪೈಪೋಟಿ ಮೊತ್ತ ಕೂಡಿ ಹಾಕಲು ಭಾರತ ಸಫಲವಾದರೆ ಗೆಲುವು ಕಷ್ಟವೇನಲ್ಲ. ಬಹುಶಃ ಭಾರತ ಇನ್ನೂ 200 ರಿಂದ 250 ರನ್ ಕಲೆ ಹಾಕುವ ಬಗ್ಗೆ ಚಿಂತನೆ ನಡೆಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ