Publish Date: Mon, 04 Dec 2017 (09:58 IST)
Updated Date: Mon, 04 Dec 2017 (10:02 IST)
ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ವಾಯುಮಾಲಿನ್ಯದಿಂದಾಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಫೀಲ್ಡಿಂಗ್ ಮಾಡುತ್ತಿದ್ದ ಲಂಕಾ ಕ್ರಿಕೆಟಿಗರು ಮೈದಾನದಿಂದ ಹೊರ ಬಂದು ವಾಂತಿ ಮಾಡಿಕೊಳ್ಳುತ್ತಿದ್ದರು ಎಂದು ಲಂಕಾ ಕೋಚ್ ನಿಕ್ ಪೋಥಸ್ ಹೇಳಿದ್ದಾರೆ.
ದೆಹಲಿ ವಾಯುಮಾಲಿನ್ಯದ ನಡುವೆ ಆಡುವುದು ನಮ್ಮ ಆಟಗಾರರಿಗೆ ಕಷ್ಟವಾಗಿತ್ತು. ವೇಗಿಗಳು ತೀರಾ ತೊಂದರೆ ಅನುಭವಿಸಿದರು. ಓವರ್ ಪೂರ್ತಿಗೊಳಿಸಲಾಗದೇ ಒದ್ದಾಡಿದರು. ಕೆಲವು ಆಟಗಾರರು ಹೊರ ಬಂದುವಾಂತಿ ಮಾಡಿಕೊಳ್ಳುತ್ತಿದ್ದರು ಎಂದು ದಿನದಾಟದ ನಂತರ ಕೋಚ್ ಪೋಥಸ್ ಹೇಳಿದ್ದಾರೆ.
ಆದರೆ ಅತ್ತ ಟೀಂ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್, ಯಾವುದೇ ಕಂಡೀಷನ್ ಆಗಿದ್ದರೂ ನಮ್ಮ ಆಟಗಾರರು ಆಡಲು ರೆಡಿಯಿದ್ದರು ಎನ್ನುವ ಮೂಲಕ ಲಂಕಾದ ಆರೋಪವನ್ನು ಕಡೆಗಣಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ