Select Your Language

Notifications

webdunia
webdunia
webdunia
webdunia

ಸಿಟ್ಟಿಗೆದ್ದು ಅರ್ಧಕ್ಕೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ನಾಯಕ ವಿರಾಟ್ ಕೊಹ್ಲಿ!

ಸಿಟ್ಟಿಗೆದ್ದು ಅರ್ಧಕ್ಕೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ನಾಯಕ ವಿರಾಟ್ ಕೊಹ್ಲಿ!
ದೆಹಲಿ , ಭಾನುವಾರ, 3 ಡಿಸೆಂಬರ್ 2017 (16:59 IST)
ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ದಿನ ಭಾರತ 536 ರನ್ ಗಳಿಗೆ ಪ್ರಥಮ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇದರ ಹಿಂದೆ ಬೇರೆಯದೇ ಕಾರಣವಿದೆ.
 

ದೆಹಲಿಯಲ್ಲಿ ವಾಯುಮಾಲಿನ್ಯವಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಪಂದ್ಯ ನಡೆಯುತ್ತಿರುವಾಗಲೂ ಶ್ರೀಲಂಕಾ ಆಟಗಾರರು ವಾಯು ಮಾಲಿನ್ಯದ ನೆಪದಲ್ಲಿ ಆಗಾಗ ಪಂದ್ಯ ನಿಲ್ಲಿಸುತ್ತಿದ್ದರು. ಓವರ್ ಪೂರ್ತಿ ಮಾಡದೇ ಪೆವಿಲಿಯನ್ ಗೆ ಮರಳುವುದು, ಆಟ ನಿಲ್ಲಿಸುವುದು ಇತ್ಯಾದಿ ನಡೆದೇ ಇತ್ತು.

ಇದರಿಂದ ಅಸಮಾಧಾನಗೊಂಡ ಟೀಂ ಇಂಡಿಯಾ ನಾಯಕ ಕೊಹ್ಲಿ 7 ವಿಕೆಟ್ ಕಳೆದುಕೊಂಡು 536 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡರು. ನಂತರ ತನ್ನ ಸರದಿ ಆರಂಭಿಸಿದ ಲಂಕಾ 3 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿದೆ. ಇನ್ನೂ ಪ್ರಥಮ ಇನಿಂಗ್ಸ್ ಮೊತ್ತ ದಾಟಲು 405  ರನ್ ಹಿನ್ನಡೆ ಹೊಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೀರು ಕುಡಿದಷ್ಟು ಸುಲಭವಾಗಿ ದ್ವಿಶತಕ ಪೂರೈಸಿದ ಕೊಹ್ಲಿ