Publish Date: Sat, 02 Dec 2017 (09:22 IST)
Updated Date: Sat, 02 Dec 2017 (09:24 IST)
ದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ ಶಿಖರ್ ಧವನ್ ವಾಪಸಾತಿಯಿಂದಾಗಿ ಕನ್ನಡಿಗ ಕೆಎಲ್ ರಾಹುಲ್ ಸ್ಥಾನ ಕಳೆದುಕೊಳ್ಳುವಂತಾಗಿದೆ.
ಕಳೆದ 12 ಇನಿಂಗ್ಸ್ ಗಳಿಂದ 9 ಅರ್ಧಶತಕ ಗಳಿಸಿ ಅದ್ಭುತ ಫಾರ್ಮ್ ನಲ್ಲಿದ್ದರೂ ರಾಹುಲ್ ರನ್ನು ಕೈ ಬಿಡಲಾಗಿದೆ. ಆದರೆ ಅತ್ತ ಕಳೆದ ಪಂದ್ಯದಲ್ಲಿ ಶತಕ ಭಾರಿಸಿದ ಮುರಳಿ ವಿಜಯ್ ರನ್ನು ಕೈ ಬಿಡಲಾಗದ ಅನಿವಾರ್ಯತೆ ಕೊಹ್ಲಿಯನ್ನು ಈ ನಿರ್ಧಾರಕ್ಕೆ ಬರುವಂತೆ ಮಾಡಿದೆ.
ಇದಲ್ಲದೆ, ಕಳೆದ ಪಂದ್ಯದಲ್ಲಿ ವಿಕೆಟ್ ಕೀಳಲು ವಿಫಲರಾದ ಉಮೇಶ್ ಯಾದವ್ ಸ್ಥಾನಕ್ಕೆ ಮೊಹಮ್ಮದ್ ಶಮಿ ಮರಳಿದ್ದಾರೆ. ಉಳಿದಂತೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಅತ್ತ ಲಂಕಾ ತಂಡದಲ್ಲಿ ರಂಗನಾ ಹೆರಾತ್, ಶನಕ, ತಿರಮನ್ನೆ ಬದಲಿಗೆ ಸಂಡಕನ್, ಧನಂಜಯ ಡಿಸಿಲ್ವ ಮತ್ತು ರೋಶೆನ್ ಆಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ