Select Your Language

Notifications

webdunia
webdunia
webdunia
webdunia

ಕೊಹ್ಲಿಯ ತಲೆನೋವಿಗೆ ಕೆಎಲ್ ರಾಹುಲ್ ತಲೆದಂಡವಾಗುತ್ತಾ?!

ಕೊಹ್ಲಿಯ ತಲೆನೋವಿಗೆ ಕೆಎಲ್ ರಾಹುಲ್ ತಲೆದಂಡವಾಗುತ್ತಾ?!
ನವದೆಹಲಿ , ಶನಿವಾರ, 2 ಡಿಸೆಂಬರ್ 2017 (08:29 IST)
ನವದೆಹಲಿ: ಶ್ರೀಲಂಕಾ ವಿರುದ್ಧ ಇಂದಿನಿಂದ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ನಾಯಕ ಕೊಹ್ಲಿಗೆ ಆರಂಭಿಕರನ್ನು ಆರಿಸುವ ಚಿಂತೆ ಆವರಿಸಿದೆ.
 

ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಶಿಖರ್ ಧವನ್ ತಂಡಕ್ಕೆ ಮರಳಿದ್ದಾರೆ. ಇದರ ನಡುವೆ ಧವನ್ ಸ್ಥಾನದಲ್ಲಿ ಆಡಿದ ಮುರಳಿ ವಿಜಯ್ ಶತಕ ಸಿಡಿಸಿದ್ದಾರೆ. ಅತ್ತ ಕೆಎಲ್ ರಾಹುಲ್ ಕೂಡಾ ಎರಡು ಅರ್ಧಶತಕ ಸಿಡಿಸಿದ್ದಾರೆ.

ಹೀಗಿರುವಾಗ ಯಾರನ್ನು ಆರಿಸುವುದು, ಯಾರನ್ನು ಬಿಡುವುದು ಎಂಬ ತಲೆನೋವು ಕೊಹ್ಲಿಗೆ ಎದುರಾಗಿದೆ. ಆದರೆ ಮುರಳಿ ವಿಜಯ್ ತಾವು ಯಾವುದಕ್ಕೂ ಸಿದ್ಧ. ನಾವು ಮೂವರೂ ಮೈದಾನದ ಹೊರಗೆ ಒಳ್ಳೆಯ ಸ್ನೇಹಿತರು. ಹೀಗಾಗಿ ಒಬ್ಬರಿಗಾಗಿ ಒಬ್ಬರು ಸ್ಥಾನ ಬಿಟ್ಟುಕೊಡಲು ಬೇಸರಿಸುವುದಿಲ್ಲ ಎಂದಿದ್ದಾರೆ.

 ಆದರೆ ಏಕದಿನ ಪಂದ್ಯದಲ್ಲಿ ಸ್ಥಾನ ಕಳೆದುಕೊಂಡಿರುವ ಕೆಎಲ್ ರಾಹುಲ್ ಮತ್ತೆ ಟೆಸ್ಟ್ ತಂಡದಲ್ಲೂ ಪೈಪೋಟಿಯಿಂದಾಗಿ ಅನುಭವಿ ಮುರಳಿ ವಿಜಯ್ ಗಾಗಿ ಸ್ಥಾನ ಬಿಡಬೇಕಾಗುತ್ತಾ? ಅಥವಾ ಧವನ್ ಮತ್ತೆ ಹೊರಗುಳಿಯುತ್ತಾರಾ ಎಂಬ ಪ್ರಶ್ನೆಗೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನಿಲ್ ಕುಂಬ್ಳೆಗಾಗಿ ಆಯ್ಕೆಗಾರರ ಜತೆ ಜಗಳವಾಡಿದ್ದರಂತೆ ಸೌರವ್ ಗಂಗೂಲಿ!