Publish Date: Thu, 30 Nov 2017 (09:12 IST)
Updated Date: Thu, 30 Nov 2017 (09:14 IST)
ಕೊಲೊಂಬೋ: ಭಾರತದ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ
ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಟೆಸ್ಟ್ ಸರಣಿ ಮುಗಿದ ಬಳಿಕ ಏಕದಿನ ಸರಣಿ ಅಗ್ನಿ ಪರೀಕ್ಷೆ ಎದುರಿಸಬೇಕಾಗಿದೆ. ಟೆಸ್ಟ್ ಸೋಲಿನ ಬಳಿಕ ಲಂಕಾ ತಂಡದ ನಾಯಕತ್ವದಲ್ಲಿ ಬದಲಾವಣೆಯಾಗಿದೆ.
ಟೀಂ ಇಂಡಿಯಾ ವಿರುದ್ಧ ಏಕದಿನ ಸರಣಿ ಆಡಲಿರುವ ಲಂಕಾ ತಂಡಕ್ಕೆ ಉಪುಲ್ ತರಂಗಾ ಸ್ಥಾನದಲ್ಲಿ ತಿಸಾರಾ ಪೆರೇರಾ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಚಂಡಿಮಾಲ್ ರಿಂದ ತೆರವಾದ ಏಕದಿನ ತಂಡದ ನಾಯಕತ್ವ ತರಂಗಾ ಪಾಲಾಗಿತ್ತು. ಆದರೆ ಟೆಸ್ಟ್ ಸರಣಿ ಭೀತಿಗೆ ಸಿಲುಕಿರುವ ಲಂಕಾ ಕ್ರಿಕೆಟ್ ಮಂಡಳಿ ಇದೀಗ ಏಕದಿನ ತಂಡದ ನಾಯಕತ್ವವನ್ನು ಪ್ರತಿಭಾವಂತ ಪೆರೇರಾ ಮುಡಿಗೇರಿಸಿದೆ. ಈ ಬದಲಾವಣೆ ಲಂಕಾ ತಂಡಕ್ಕೆ ಎಷ್ಟು ಅದೃಷ್ಟ ತಂದುಕೊಡುತ್ತೋ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ