Select Your Language

Notifications

webdunia
webdunia
webdunia
webdunia

ಈ ವರ್ಷ ಐಪಿಎಲ್ ಸಾಧ್ಯವೇ ಇಲ್ಲ ಎಂದ ಸೌರವ್ ಗಂಗೂಲಿ

ಈ ವರ್ಷ ಐಪಿಎಲ್ ಸಾಧ್ಯವೇ ಇಲ್ಲ ಎಂದ ಸೌರವ್ ಗಂಗೂಲಿ
ಮುಂಬೈ , ಮಂಗಳವಾರ, 7 ಜುಲೈ 2020 (09:51 IST)
ಮುಂಬೈ: ಕೊರೋನಾ ಒಂದು ಹಂತಕ್ಕೆ ಬಂದ ಮೇಲೆ ಭಾರತದಲ್ಲಿ ಐಪಿಎಲ್ ನಡೆಯಬಹುದು ಎಂದು ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿರಾಸೆಯುಂಟುಮಾಡುವ ವಿಚಾರ ಹೇಳಿದ್ದಾರೆ.


ಸದ್ಯದ ಪರಿಸ್ಥಿತಿ ಗಮನಿಸಿದರೆ ಈ ವರ್ಷದ ಅಂತ್ಯದವರೆಗೂ ಭಾರತದಲ್ಲಿ ಐಪಿಎಲ್ ನಡೆಸುವುದು ಕಷ್ಟ ಎಂದು ಗಂಗೂಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಜತೆಗಿನ ಚ್ಯಾಟ್ ಶೋನಲ್ಲಿ ಗಂಗೂಲಿ ಐಪಿಎಲ್ ಬಗ್ಗೆ ಈ ಹೇಳಿಕೆ ನೀಡಿದ್ದಾರೆ. ‘ಮುಂದಿನ ಮೂರು-ನಾಲ್ಕು ತಿಂಗಳು ತುಂಬಾ ತ್ರಾಸದಾಯಕವಾಗಿರಲಿದೆ. ಆದರೆ ಅದನ್ನು ಎದುರಿಸಲೇಬೇಕಿದೆ. ಆದಷ್ಟು ಬೇಗ ಕೊರೋನಾಗೆ ವ್ಯಾಕ್ಸಿನ್ ಬರಲಿ ಎಂದು ಹಾರೈಸುವೆ’ ಎಂದು ಗಂಗೂಲಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹ್ಯಾಪೀ ಬರ್ತ್ ಡೇ ಮಾಹಿ: ಧೋನಿ ಹುಟ್ಟುಹಬ್ಬಕ್ಕೆ ಟೀಂ ಇಂಡಿಯಾ ಹುಡುಗರ ಸ್ಪೆಷಲ್ ವಿಶ್