Select Your Language

Notifications

webdunia
webdunia
webdunia
webdunia

ಮುಂಬೈ ವಿರುದ್ಧ ಗೆದ್ದು ಬೀಗಿದ ಸ್ಮೃತಿ ಮಂಧಾನ ಪಡೆ: ಗೆಲುವಿನೊಂದಿಗೆ WPLನಿಂದ ಹೊರನಡೆದ ಆರ್‌ಸಿಬಿ

WPL 2025

Sampriya

ಬೆಂಗಳೂರು , ಮಂಗಳವಾರ, 11 ಮಾರ್ಚ್ 2025 (22:57 IST)
Photo Courtesy X
ಬೆಂಗಳೂರು: ಇಂದು ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದ ಡಬ್ಲ್ಯೂಪಿಎಲ್‌ ಪಂದ್ಯಾಟದಲ್ಲಿ ಆರ್‌ಸಿಬಿ 6 ವಿಕೆಟ್‌ಗಳ ಜಯ ಸಾಧಿಸಿತು. ಈ ಮೂಲಕ ಆರ್‌ಸಿಬಿ ಸತತ ಐದು ಸೋಲಿನ ಸುಳಿವಿನಿಂದ ಹೊರ ಬಂದು ಗೆಲುವಿನೊಂದಿಗೆ ಡಬ್ಯೂಪಿಎಲ್‌ನಿಂದ ಹೊರನಡೆದಿದೆ.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್‌ ಫೀಲ್ಡಿಂಗ್‌ ಆಯ್ದು, ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಸ್ವಾಗತಿಸಿತು. ಆರ್‌ಸಿಬಿ 50 ಓವರ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡು ಮುಂಬೈ ಇಂಡಿಯನ್ಸ್‌ಗೆ 200 ರನ್‌ಗಳ ಟಾರ್ಗೆಟ್‌ ನೀಡಿತು.

ಆದರೆ ಮುಂಬೈ ಇಂಡಿಯನ್ಸ್‌ 8 ವಿಕೆಟ್‌ ಕಳೆದುಕೊಂಡು ತಮ್ಮ ತಾಯ್ನಾಡಿನ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತು.

ಆರಂಭಿಕ ಎರಡು ಪಂದ್ಯಗಳನ್ನು ಗೆದ್ದು, ಸತತ ಐದು ಪಂದ್ಯಗಳನ್ನು ಸೋತು ನಾಕೌಟ್‌ ರೇಸ್‌ನಿಂದ ಹೊರಗುಳಿದಿರುವ ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಇಂದು ಗೆಲುವಿನೊಂದಿಗೆ ಪಂದ್ಯಾಟದಿಂದ ಹೊರನಡೆಯಿತು.

===





Share this Story:

Follow Webdunia kannada

ಮುಂದಿನ ಸುದ್ದಿ

WPL 2025: ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ