ಆರ್ ಸಿಬಿ ಸೇರಿದ ಮೇಲೆ ಡಲ್ ಹೊಡೀತಿದೆ ಸ್ಮೃತಿ ಮಂಧನಾ ಬ್ಯಾಟಿಂಗ್

Webdunia
ಸೋಮವಾರ, 17 ಜುಲೈ 2023 (08:50 IST)
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಇತ್ತೀಚೆಗೆ ಯಾಕೋ ಫಾರ್ಮ್ ಕೊರತೆ ಅನುಭವಿಸುತ್ತಿದ್ದಾರೆ.
 

ಭಾರತ ಮಹಿಳಾ ತಂಡದ ಬ್ಯಾಟಿಂಗ್ ಆಧಾರ ಸ್ತಂಬವಾಗಿರುವ ಸ್ಮೃತಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡುವ ಛಲಗಾತಿ. ಆಕೆಯನ್ನು ಬ್ಯಾಟಿಂಗ್ ಕ್ವೀನ್ ಎಂದೇ ಅಭಿಮಾನಿಗಳು ಕರೆಯುತ್ತಾರೆ.

ಆದರೆ ಡಬ್ಲ್ಯುಪಿಎಲ್ ಕೂಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡ ಬಳಿಕ ಸ್ಮೃತಿ ಬ್ಯಾಟ್ ಇದುವರೆಗೆ ಸದ್ದು ಮಾಡುತ್ತಿಲ್ಲ. ಮಹಿಳಾ ಐಪಿಎಲ್ ನಲ್ಲಿ ಸ್ಮೃತಿ ದಯನೀಯ  ವೈಫಲ್ಯ ಅನುಭವಿಸಿದ್ದರು. ಇದೀಗ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಲ್ಲೂ ಸ್ಮೃತಿ ಹೇಳಿಕೊಳ್ಳುವಂತಹ ಇನಿಂಗ್ಸ್ ಆಡಲಿಲ್ಲ. ಮೊದಲ ಪಂದ್ಯದಲ್ಲಿ 38 ರನ್ ಗಳಿಸಿದ್ದು ಬಿಟ್ಟರೆ ಮತ್ತುಳಿದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 13 ಮತ್ತು 1 ರನ್ ಗಳಿಸಿದ್ದಾರೆ. ಇದೀಗ ನಿನ್ನೆ ನಡೆದ ಬಾಂಗ್ಲಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲೂ ಸ್ಮೃತಿ ಕೊಡುಗೆ 11 ರನ್. ಸ್ಮೃತಿ ಫಾರ್ಮ್ ಕೊರತೆ ಅನುಭವಿಸುತ್ತಿರುವುದು ತಂಡದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಯಾಕೋ ಆರ್ ಸಿಬಿ ತಂಡಕ್ಕೆ ಬಂದಾಗಿನಿಂದ ಸ್ಮೃತಿ ಎಂದಿನಿಂತೆ ಮಿಂಚುತ್ತಿಲ್ಲ ಎನ್ನುವುದು ಅಭಿಮಾನಿಗಳಿಗೂ ನಿರಾಸೆ ತಂದಿದೆ.
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟ ಹರ್ಲೀನ್ ಡಿಯೋಲ್ ಪ್ರಶ್ನೆಗೆ ಎಲ್ಲರಿಗೂ ನಗು

ವಿಶ್ವಕಪ್‌ ಗೆದ್ದ ಚಾರಿತ್ರಿಕ ಸಾಧನೆ ಮೆರೆದ ಭಾರತದ ವನಿತೆಯರಿಗೆ ಟಾಟಾ ಸಂಸ್ಥೆಯಿಂದ ಭರ್ಜರಿ ಗಿಫ್ಟ್‌

ಆರ್‌ಸಿಬಿ ತಂಡ ಮಾರಾಟವಾಗೋದು ಪಕ್ಕಾ: ಮುಂದಿನ ವರ್ಷದಲ್ಲೇ ಫ್ರ್ಯಾಂಚೈಸಿಗೆ ಹೊಸ ಮಾಲೀಕರು

IND vs AUS: ಟೀಂ ಇಂಡಿಯಾಕ್ಕೆ ಮತ್ತೆ ಮತ್ತೆ ಟಾಸ್ ಸೋಲು, ಟಾಸ್ ಗೆಲ್ಲೋದು ಹಣೇಲೇ ಬರೆದಿಲ್ಲ

ಮೊಹಮ್ಮದ್ ಶಮಿ ಏನು ತಪ್ಪು ಮಾಡಿದ್ದಾರೆ.. ಅಜಿತ್ ಅಗರ್ಕರ್ ವಿರುದ್ಧ ಫ್ಯಾನ್ಸ್ ಗರಂ

ಮುಂದಿನ ಸುದ್ದಿ
Show comments