Webdunia - Bharat's app for daily news and videos

Install App

ನ್ಯೂಜಿಲೆಂಡ್ ಗೆ ಗ್ರಿಲ್ ಮಾಡಿದ ಶುಬ್ನಂ ಗಿಲ್: ದಾಖಲಾಯ್ತು ಮತ್ತೊಂದು ಏಕದಿನ ದ್ವಿಶತಕ

Webdunia
ಬುಧವಾರ, 18 ಜನವರಿ 2023 (17:28 IST)
Photo Courtesy: Twitter
ಹೈದರಾಬಾದ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿದೆ. ಇಂದಿನ ಆಟದ ಪ್ರಮುಖ ಆಕರ್ಷಣೆ ಶುಬ್ನಂ ಗಿಲ್ ದ್ವಿಶತಕ. ಏಕದಿನ ಕ್ರಿಕೆಟ್ ನಲ್ಲಿ ಭಾರತದ ಪರ ಈ ವರ್ಷದ ಆರಂಭದಲ್ಲೇ ಮತ್ತೊಂದು ದ್ವಿಶತಕ ದಾಖಲಾಯಿತು.

ಒಟ್ಟು 149 ಎಸೆತ ಎದುರಿಸಿದ ಆರಂಭಿಕ ಗಿಲ್ 49 ನೇ ಓವರ್ ವರೆಗೂ ಬ್ಯಾಟಿಂಗ್ ಮಾಡಿದ ನಾಲ್ಕು ಎಸೆತ ಬಾಕಿ ಇರುವಾಗ 208 ರನ್ ಗಳಿಸಿ ಔಟಾದರು. ಇದು ಭಾರತದ ಪರ ಏಕದಿನ ಕ್ರಿಕೆಟ್ ನಲ್ಲಿ ದಾಖಲಾದ ಐದನೇ ದ್ವಿಶತಕವಾಗಿದೆ. ಇತ್ತೀಚೆಗಷ್ಟೇ ಇಶಾನ್ ಕಿಶನ್ ಈ ಸಾಧನೆ ಮಾಡಿದ್ದರು.

ಇನ್ನು ಆರಂಭಿಕ ರೋಹಿತ್ ಶರ್ಮಾ ಉತ್ತಮ ಆರಂಭ ಪಡೆದರೂ 34 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ 8, ಇಶಾನ್ ಕಿಶನ್ 5 ರನ್ ಗೆ ಇನಿಂಗ್ಸ್ ಮುಗಿಸಿದರು. ಬಳಿಕ ಶುಬ್ನಂಗೆ ಜೊತೆಯಾದ ಸೂರ್ಯಕುಮಾರ್ ಯಾದವ್ 31 ರನ್ ಗಳಿಗೆ ಔಟಾದರೆ, ಹಾರ್ದಿಕ್ ಪಾಂಡ್ಯ 28 ರನ್ ಗಳಿಸಿದಾಗ  ವಿವಾದಾತ್ಮಕ ತೀರ್ಪಿಗೆ ಔಟಾದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ENG vs IND: ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ, ತಂಡದ ನಾಯಕನೇ ಪ್ರಮುಖ ಪಂದ್ಯದಿಂದ ಹೊರಕ್ಕೆ

ENG vs IND: ನಾಳೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾಗೆ ಬಿಗ್ ಶಾಕ್‌, ಪ್ರಮುಖ ಆಟಗಾರನೇ ಪಂದ್ಯಕ್ಕಿಲ್ಲ

ಟಿ20 ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದ ಭಾರತದ ಎಡಗೈ ಬ್ಯಾಟರ್‌ ಅಭಿಷೇಕ್ ಶರ್ಮಾ

Video: ಗೌತಮ್ ಗಂಭೀರ್ ಪಿಚ್ ಕ್ಯುರೇಟರ್ ನಡುವೆ ನಿಜಕ್ಕೂ ನಡೆದಿದ್ದೇನು ಇಲ್ಲಿದೆ ವಿವರ

ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರು

ಮುಂದಿನ ಸುದ್ದಿ
Show comments