Webdunia - Bharat's app for daily news and videos

Install App

Shubman Gill: ಸಚಿನ್, ಕೊಹ್ಲಿಗೇ ಇಲ್ಲದ ಅಹಂ ಶುಬ್ಮನ್ ಗಿಲ್ ತಲೆಗೆ ಹತ್ತಿದ್ಯಾ: ನೆಟ್ಟಿಗರ ಆಕ್ರೋಶ

Krishnaveni K
ಶುಕ್ರವಾರ, 13 ಜೂನ್ 2025 (10:37 IST)
Photo Credit: X
ಲಂಡನ್: ಟೀಂ ಇಂಡಿಯಾ ಟೆಸ್ಟ್ ತಂಡದ ನೂತನ ನಾಯಕ ಶುಬ್ಮನ್ ಗಿಲ್ ತಮ್ಮ ಬ್ಯಾಟ್ ನಲ್ಲಿ ಅಂಟಿಸಿಕೊಂಡಿರುವ ಸ್ಟಿಕರ್ ನಿಂದ ಈಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಸಚಿನ್, ಕೊಹ್ಲಿಗೇ ಇಲ್ಲದ ಅಹಂ ಇವರಿಗದೆ ಎಂದು ಫ್ಯಾನ್ಸ್ ತರಾಟೆಗೆ ತೆಗೆದುಕೊಂಡಿದ್ದಾರೆ.

ರೋಹಿತ್ ಶರ್ಮಾ ನಿವೃತ್ತಿಯಾದ ಬಳಿಕ ಟೀಂ ಇಂಡಿಯಾ ಟೆಸ್ಟ್ ನಾಯಕರಾಗಿ ಶುಬ್ಮನ್ ಗಿಲ್ ರನ್ನು ಆಯ್ಕೆ ಮಾಡಲಾಗಿದೆ. ಇದೀಗ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಗಿಲ್ ಭಾರತ ತಂಡದ ನಾಯಕರಾಗಿರಲಿದ್ದಾರೆ.

ಈ ನಡುವೆ ಅವರ ಫೋಟೋ ಶೂಟ್ ಕ್ಷಣಗಳನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದರಲ್ಲಿ ಗಿಲ್ ಬ್ಯಾಟ್ ಮೇಲೆ ಪ್ರಿನ್ಸ್ ಎಂದು ಬರೆದಿರುವುದು ನೋಡಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಗಿಲ್ ರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ಪ್ರಿನ್ಸ್ ಎಂದು ಕರೆಯುವುದಿದೆ. ಹಾಗಂತ ಅವರು ಅದನ್ನೇ ಬ್ಯಾಟ್ ಗೆ ಹಚ್ಚಿಕೊಂಡು ಆಟಿಟ್ಯೂಡ್ ತೋರಿಸುತ್ತಿದ್ದಾರೆ ಎಂಬುದು ನೆಟ್ಟಿಗರ ಆಕ್ರೋಶವಾಗಿದೆ. ಸಚಿನ್ ರನ್ನು ಕ್ರಿಕೆಟ್ ದೇವರು ಎನ್ನುತ್ತಿದ್ದರು. ಕೊಹ್ಲಿಯನ್ನು ಕಿಂಗ್ ಎನ್ನುತ್ತಾರೆ. ಹಾಗಂತ ಎಂದೂ ಅವರು ಅದನ್ನು ತಮ್ಮ ಬ್ಯಾಟ್ ಮೇಲೆ ಬರೆಯಿಸಿಕೊಂಡು ತಮ್ಮನ್ನು ತಾವು ಕೊಚ್ಚಿಕೊಂಡಿಲ್ಲ ಎನ್ನುವುದು ಅಭಿಮಾನಿಗಳ ವಾದವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

WTC Final: ರಬಾಡ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ದಕ್ಷಿಣ ಆಫ್ರಿಕಾ ತಂಡವೂ ಆರಂಭದಲ್ಲೇ ಕುಸಿತ

WTC Final: ಆಸ್ಟ್ರೇಲಿಯಾ, ಆಫ್ರಿಕಾ ನಡುವೆ ಫೈನಲ್, ಟೀಂ ಇಂಡಿಯಾಗೂ ಸಿಗಲಿದೆ ದುಡ್ಡು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

ಮುಂದಿನ ಸುದ್ದಿ
Show comments