Webdunia - Bharat's app for daily news and videos

Install App

Shubman Gill: ಹಾರ್ದಿಕ್ ಪಾಂಡ್ಯ ಜೊತೆ ಮುನಿಸು, ಎಲ್ಲವನ್ನೂ ಬಿಚ್ಚಿಟ್ಟ ಶುಬ್ಮನ್ ಗಿಲ್, ಫ್ಯಾನ್ಸ್ ಶಾಕ್

Sampriya
ಶನಿವಾರ, 31 ಮೇ 2025 (18:46 IST)
Photo Credit X
ಮುಲ್ಲನ್‌ಪುರ: ಭಾರತದ ಸ್ಟಾರ್‌ ಕ್ರಿಕೆಟ್ ಆಟಗಾರರಾದ ಶುಬ್ಮನ್ ಗಿಲ್ ಹಾಗೂ ಹಾರ್ದಿಕ್ ಪಾಂಡ್ಯ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಗುಸು ಗುಸು ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರಿದಾಡುತ್ತಿದೆ.

ಇದರ ಬೆನ್ನಲ್ಲೇ ಈ ಎಲ್ಲ ಊಹಾಪೋಹಗಳಿಗೆ  ಗುಜರಾತ್‌ ಟೈಟನ್ಸ್ ನಾಯಕ ಶುಬ್ಮನ್ ಗಿಲ್ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ನಿನ್ನೆ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್‌ ಪಂದ್ಯಾಟದ ವೇಳೆ ಟೀಂ ಇಂಡಿಯಾದ ಇಬ್ಬರು ಪ್ರಮುಖ ಆಟಗಾರರು ಪರಸ್ಪರ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಟಾಸ್ ವೇಳೆಯೇ ಇಬ್ಬರು ಒಬ್ಬರನೊಬ್ಬರ ಮುಖವನ್ನು ನೋಡಲು ಇಷ್ಟಪಡಲಿಲ್ಲ. ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ, ಶುಬ್ಮನ್ ಗಿಲ್‌ಗೆ ಶೇಕ್ ಹ್ಯಾಂಡ್ ಮಾಡಲು ಮುಂದಾದಗ ಅದನ್ನು ಅವರು ಲೆಕ್ಕಿಸದೆ ಬೇರೆಡೆ ಗಮನಕೊಟ್ಟಿದ್ದಾರೆ.

ಅದಲ್ಲದೆ ಬ್ಯಾಟಿಂಗ್ ವೇಳೆ ಶುಬ್ಮನ್ ಗಿಲ್ ಔಟ್ ಆದಾಗ ಹಾರ್ದಿಕ್ ಪಾಂಡ್ಯ ಅವರ ಹತ್ತಿರಕ್ಕೆ ಬಂದು ಸಂಭ್ರಮಾಚರಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದನ್ನು ನೋಡಿದ ನೆಟ್ಟಿಗರು, ಇವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂದಿದ್ದಾರೆ. ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಶುಭ್‌ಗಿಲ್‌ ಪ್ರತಿಕ್ರಿಯಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಜತೆಗಿನ ನಿನ್ನೆಯ ಫೋಟೋ ಹಾಗೂ ಈ ಹಿಂದೆ ಟೀಂ ಇಂಡಿಯಾದ ಪಂದ್ಯಾಟದ ವೇಳೆಯೇ  ಆತ್ಮೀಯ ಕ್ಷಣದ ಫೋಟೋವನ್ನು ಶೇರ್ ಮಾಡಿ, ಇದೆಲ್ಲ ಪ್ರೀತಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಎಲ್ಲ ವಿಷಯಗಳನ್ನು ನಂಬಬೇಡಿ ಎಂದು ಶುಭ್‌ಮನ್ ಗಿಲ್ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೂರನೇ ಟೆಸ್ಟ್‌ನ ಕೊನೆಯಲ್ಲಿ ಸಿರಾಜ್‌ ಔಟಾದಾಗ ಏನನ್ನಿಸಿತು: ಶುಭಮನ್‌ ಗಿಲ್‌ಗೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

IND vs ENG: ಹಾರ್ಟ್ ಬ್ರೇಕ್ ನಂತರ ಟೀಂ ಇಂಡಿಯಾ ಮುಂದಿನ ಟೆಸ್ಟ್ ಪಂದ್ಯ ಯಾವಾಗ, ಎಲ್ಲಿ

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡ್ತಾರಾ, ಕ್ಯಾಪ್ಟನ್ ಗಿಲ್ ಹೇಳಿದ್ದೇನು

ಲೈಂಗಿಕ ಕಿರುಕುಳ ಪ್ರಕರಣ: ಆರ್‌ಸಿಬಿ ಆಟಗಾರ ಯಶ್ ದಯಾಳ್‌ಗೆ ತಾತ್ಕಾಲಿಕ ರಿಲೀಫ್‌

WI vs AUS: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ಮೊತ್ತಕ್ಕೆ ಔಟಾದ ವೆಸ್ಟ್ ಇಂಡೀಸ್

ಮುಂದಿನ ಸುದ್ದಿ
Show comments